ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ಕೊಡಿ: ರೈತ ಸಂಘದ ಸಂಸ್ಥಾಪಕ ಕೃಷ್ಣೇಗೌಡ ಒತ್ತಾಯ

Forced to allow trial blast Mandya
Published on

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯ ಸುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದಾಗುವ ಪರಿಣಾಮ ಹಾಗೂ ದುಷ್ಪರಿಣಾಮ ಕುರಿತು ಸತ್ಯಾಸತ್ಯತೆಯನ್ನು ಅರಿಯಲು ರಾಜ್ಯಸರ್ಕಾರ ಹಾಗೂ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ಕೊಡಬೇಕೆಂದು ರೈತ ಸಂಘದ ಸಂಸ್ಥಾಪಕ(ರೈತ ಬಣ) ಇ.ಎನ್.ಕೃಷ್ಣೇಗೌಡ ಇಂಗಲಗುಪ್ಪೆ ಒತ್ತಾಯಿಸಿದರು.

ಡ್ಯಾಂ ನಿರ್ಮಾಣವಾದ ದಿನದಿಂದಲೂ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಇತ್ತೀಚೆಗೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಗಣಿಗಾರಿಕೆಯಿಂದಾಗುತ್ತಿರುವ ಬಗ್ಗೆ ಪರಿಣಾಮದ ನೈಜ ವರದಿ ಸಾರ್ವಜನಿಕರ ಮುಂದಿಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೆಲವರು ರಾಜಕೀಯ ಕಾರಣಕ್ಕಾಗಿ ಟ್ರಯಲ್ ಬ್ಲಾಸ್ಟ್‌ಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಖಚಿತ ವರದಿ ಬರುವ ಮುನ್ನವೇ ಸಾಧಕ ಬಾಧಕಗಳನ್ನು ಕಲ್ಪನೆ ಮಾಡಿಕೊಂಡು ಯಾವುದನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ನಮ್ಮ ಸಂಘಟನೆ ಕೂಡ ಕೆಆರ್‌ಎಸ್ ಡ್ಯಾಂನ ಸುರಕ್ಷತೆ ದೃಷ್ಟಿಯಿಂದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಮೊದಲು ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ಕೊಟ್ಟು ನಂತರದ ವರದಿಯನ್ನು ಗಮನಿಸಿ ತೀರ್ಮಾನ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ರಾಜ್ಯ ವರಿಷ್ಠ ಎಚ್.ಎಸ್.ಚಂದ್ರಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಕೆಂಪರಾಜು, ರಾಜ್ಯ ಸಂಚಾಲಕ ರಾಮೇಗೌಡ, ನಿರ್ದೇಶಕ ಮಾಲಿಕ್ ಆವರ್ತಿ, ಮೈಸೂರು ನಗರ ಅಧ್ಯಕ್ಷೆ ನಾಗರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net