ಹಿಂದು ಸಮುದಾಯದ ರಕ್ಷಣೆಗೆ ಮುಂದಾಗಲು ಒತ್ತಾಯ

Ksd_Protest
Published on

ಮೈಸೂರು: ಬಾಂಗ್ಲಾ ದೇಶ ತೀವ್ರ ಹಿಂಸಾಚಾರದಿಂದ ಬಳಲುತ್ತಿದ್ದು, ಅಲ್ಲಿನ ಹಿಂದು ಸಮುದಾಯದವರ ರಕ್ಷಣೆಗೆ ಕೇಂದ್ರ ಸರ್ಕಾರ ಹಾಗೂ ವಿಶ್ವ ಸಮುದಾಯ ಮುಂದಾಗಬೇಕೆಂದು ಆಗ್ರಹಿಸಿ ಹಿಂದು ಹಿತರಕ್ಷಣಾ ಸಮಿತಿಯ ಪ್ರಾಂತ ಪ್ರಮುಖ ಕೆ.ಟಿ.ಉಲ್ಲಾಸ್ ಒತ್ತಾಯಿಸಿದರು.
ಬಾಂಗ್ಲಾ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ಬಳಿಕ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ವೇಳೆ ಅಲ್ಲಿನ ನೂರಕ್ಕೂ ಹೆಚ್ಚು ಹಿಂದು ದೇವಾಲಯಗಳಿಗೆ ಹಾನಿಯಾಗಿದೆ. ಹಿಂದು ವ್ಯಾಪಾರ ಸಂಸ್ಥೆಗಳು ಹಾಗೂ ಹಿಂದುಗಳ ಮನೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಯುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮಾನವ ಹಕ್ಕು ಮತ್ತು ಧಾರ್ಮಿಕ ಹಕ್ಕಿಗೆ ಚ್ಯುತಿ ಬಂದಿದೆ. ಹೀಗಾಗಿ ಒಕ್ಕೂಟ ಅವರ ರಕ್ಷಣೆಗೆ ಮುಂದಾಗಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಲ್ಲಿನ ಭೀಕರ ಪರಿಸ್ಥಿತಿಯ ಲಾಭ ಪಡೆದು ಗಡಿಯಾಚೆಯಿಂದ ಭಾರತಕ್ಕೆ ಜಿಹಾದಿಗಳು ನುಸುಳುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿದರು. ಪದಾಧಿಕಾರಿಗಳಾದ ಮಹೇಶ್ ಕಾಮತ್, ಲೋಹಿತ್ ಅರಸ್, ಮಹೇಶ್ ಕಡಗದಾಳು, ರಂಗಸ್ವಾಮಿ, ಮಧುಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net