

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನ್ಯತೆಗಳನ್ನು ಪರಿಶೀಲಿಸಲು ರಚಿಸಿರುವ ಸಂಜಯ್ ಕುಮಾರ್ ನೇತೃತ್ವದ ಸಮಿತಿಯು ಭೇಟಿ ನೀಡಿ ನೈಜತೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವವರೆಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜೀತ್‌ಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಿವಿಧ ರೀತಿಯ ಅರಣ್ಯ ಎಂದು ಘೋಷಿಸಿ ಲಕ್ಷಾಂತರ ಹೆಕ್ಟರ್ ಪ್ರದೇಶವನ್ನು ಅರಣ್ಯೀಕರಣಗೊಳಿಸಲಾಗಿದೆ. ಆದರೆ ಅರಣ್ಯೀಕರಣಗೊಳಿಸುವ ಸಂದರ್ಭದಲ್ಲಿ ಈ ಭಾಗಗಳಲ್ಲಿ ವಾಸಿಸುವ ಜನರ ಸಮಸ್ಯೆಯ ವಾಸ್ತವಿಕತೆಯನ್ನು ಸರ್ಕಾರಕ್ಕೆ ಮರೆಮಾಚಿ ಸಂಬAಧಪಟ್ಟ ಅಧಿಕಾರಿಗಳು ಜನರಿಗೆ ಸಂಕಷ್ಟವನ್ನು ತಂದೊಡ್ಡಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟಿçÃಯ ಉದ್ಯಾನವನ, ಭದ್ರಾ ಅಭಯಾರಣ್ಯ, ಸ್ಟೇಟ್ ಫಾರೆಸ್ಟ್, ಮೀಸಲು ಅರಣ್ಯ, ಗ್ರಾಮೀಣ ಅರಣ್ಯ, ಡೀಮ್ಡ್ ಫಾರೆಸ್ಟ್, ಸೊಪ್ಪಿನಬೆಟ್ಟ, ರಕ್ಷಿತ ಅರಣ್ಯ ಎಂಬ ಹಲವು ಹೆಸರಿನಿಂದ ಶೇ. ೫೦ಕ್ಕೂ ಹೆಚ್ಚು ಭೂ ಪ್ರದೇಶಗಳ ಅರಣ್ಯವನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮುಳ್ಳಯ್ಯನಗಿರಿ ಮೀಸಲು ಸಂರಕ್ಷಣಾ ಸೂಕ್ಷö್ಮ ಪ್ರದೇಶ ಯೋಜನೆ ಹಾಗೂ ಸೆಕ್ಷನ್ ೪(೧) ಹೆಸರಿನಲ್ಲಿ ಲಕ್ಷಾಂತರ ಎಕರೆ ಗೋಮಾಳ, ಹುಲ್ಲು ಬನ್ನಿ, ಸೊಪ್ಪಿನ ಬೆಟ್ಟ ಕಂದಾಯ ಭೂಮಿಗಳನ್ನು ಸೇರಿದಂತೆ ಹೊಸ ಯೋಜನೆಗಳಿಗೆ ಸೇರಿಸಿ ಸಂಪೂರ್ಣವಾಗಿ ಮಲೆನಾಡಿನ ಜನರ ಬದುಕು ಮತ್ತು ಸಂಸ್ಕೃತಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ರೈತರು ತಮ್ಮ ಜೀವನೋಪಕ್ಕಾಗಿ ಒಂದರಿAದ ಮೂರು ಎಕರೆ ಪ್ರದೇಶಗಳನ್ನು ಸಾಗುವಳಿ ಮಾಡಿ ಸರ್ಕಾರದ ನಿರ್ದೇಶನದಂತೆ ಫಾರಂ ನಂಬರ್ ೫೦, ೫೩, ೫೭ ಅರ್ಜಿಗಳನ್ನು ಹಾಕಿ ಭೂ ಮಂಜೂರಾತಿ ನಿರೀಕ್ಷೆಯಲ್ಲಿರುವ ಬಡವರ ನಂಬಿಕೆ ವಿಫಲವಾಗಿದೆ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಿವೇಶನ ರೈತರು ನಿವೇಶನಕ್ಕಾಗಿ ಸಂಬAಧಪಟ್ಟ ಗ್ರಾಮ ಪಂಚಾಯತಿಗಳಿಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ ಹಾಗೂ ಹತ್ತಾರು ವರ್ಷಗಳಿಂದ ವಾಸಕ್ಕೆ ಮನೆ ನಿರ್ಮಿಸಿಕೊಂಡು ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ, ತಾಲೂಕು ಕಚೇರಿ ಮತ್ತು ಗ್ರಾಮ ಪಂಚಾಯತಿಗಳಿAದ ನಿವೇಶನ ಮಂಜೂರು ಮಾಡಲು ಬಹುತೇಕ ಸರ್ವೇ ನಂಬರ್‌ಗಳ ಪ್ರದೇಶಗಳ ಕಾಡು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲ್ಪಟ್ಟಿರುವುದರಿಂದ ಹಾಗೂ ಅವರು ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡಿರುವುದರಿAದ ನೆಪ ಹೇಳಿ ಹತ್ತಾರು ವರ್ಷಗಳಿಂದ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್. ವಿಜಯ್ ಕುಮಾರ್, ಸಂಚಾಲಕ ಕೆ.ಕೆ. ರಘು, ವಾಸು ಪೂಜಾರಿ, ಚಂದ್ರೇಗೌಡ ಕಳವಾಸೆ, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಮಾಜಿ ಅಧ್ಯಕ್ಷ ಬಸವರಾಜ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಎಚ್.ಎಂ.ರೇಣುಕಾರಾಧ್ಯ, ಆಮ್ ಆದ್ಮಿ ಪಕ್ಷದ ಮುಖಂಡ ಡಾ. ಸುಂದರೇಗೌಡ, ನವ ಕರ್ನಾಟಕ ಸಂಘಟನೆಯ ಮುಖಂಡ ರಘು, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ ಮತ್ತಿತರರಿದ್ದರು.