ವಿವಾಹಿತೆಗೆ ಮದುವೆಯಾಗಲು ಒತ್ತಾಯಿಸಿ, ಹಲ್ಲೆ ಮಾಡಿದ ಪಾಗಲ್ ಪ್ರೇಮಿ

99990
Published on

ಚಿಕ್ಕಬಳ್ಳಾಪುರ: ಮಹಿಳಾ ಮೇಲಧಿಕಾರಿಗೆ ಮರು ಮದುವೆಯಾಗಲು ಒತ್ತಾಯಿಸಿದ ಗ್ಯಾಂಗ್ ಮ್ಯಾನ್ ಸೇರಿದಂತೆ ಇಬ್ಬರು ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.
ಗುಡಿಬಂಡೆಯ ಸೋಮಶೇಖರ್ (38) ಆರೋಪಿ. ಸಂತ್ರಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ
ಶಿಡ್ಲಘಟ್ಟ ತಾಲೂಕಿನ ಬೆಸ್ಕಾಂ ಶಾಖೆಯಲ್ಲಿ ಓ.ಎ ಗ್ರೇಡ್-2 ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂತ್ರಸ್ಥೆಗೆ ಆರೋಪಿ ಪ್ರೀತಿ ಮಾಡಲು ಮೊದಲಿನಿಂದಲೂ ಒತ್ತಾಯಿಸುತ್ತಿದ್ದ. ಆದರೆ, ಇದನ್ನು ನಿರಾಕರಿಸಿ ಮಹಿಳೆ ಬೇರೊಬ್ಬರನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದರ ನಡುವೆಯೂ ಆಗಾಗ ಬಂದು ಪ್ರೀತಿಸಲು ಪಾಗಲ್ ಪ್ರೇಮಿ ಹಿಂಸೆ ನೀಡಿದ್ದಾನೆ. ಇದಕ್ಕೆ ಜಗ್ಗದ ಹಿನ್ನೆಲೆಯಲ್ಲಿ ಗಂಗಪ್ಪ ಎಂಬುವರೊಂದಿಗೆ ಬಂದು, ಹಲ್ಲೆ ನಡೆಸಿದ್ದಾನೆ. ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸಂತ್ರಸ್ಥೆಯು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸರ್ಕಾರಿ ಕರ್ತವ್ಯದಲ್ಲಿದ್ದ ತನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿ, ಕೆಲಸಕ್ಕೆ ಅಡ್ಡಪಡಿಸಿದ್ದು ಅಸಭ್ಯವಾಗಿ ವರ್ತಿಸಿ, ಅವ್ಯಾಚ್ಛ ಶಬ್ದಗಳ ನಿಂದನೆಯ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net