ಇಚ್ಚಾಶಕ್ತಿಯಿಂದ ಸಂಘಟನೆಗೆ ಬಲ

MLA Shivaram Hebbar Talking
Published on

ಯಲ್ಲಾಪುರ: ಇಚ್ವಾಶಕ್ತಿಯಿದ್ದರೆ ಮಾತ್ರ ಯಾವುದೇ ಸಂಘಟನೆ ಯಶಸ್ಸಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಪ್ರಗತಿ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕ ಕಂಪನಿಯ ಪ್ರಥಮ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಹಿಳಾ ಉತ್ಪಾದಕ ಕಂಪನಿ ಇದೇ ಮೊದಲಾಗಿದ್ದು, ಉತ್ಪಾದನಾ ಕಂಪನಿಗೆ ಶ್ರಮಪಟ್ಟು ಜೀವ ತುಂಬುವ ಪ್ರಯತ್ನ ಮಾಡಿರುವುದು ಗಮನಾರ್ಹ ಎಂದರು.

ಎಂಎಲ್​ಸಿ ಶಾಂತಾರಾಮ ಸಿದ್ದಿ ಮಾತನಾಡಿ, ಮಹಿಳಾ ಉತ್ಪಾದಕ ಕಂಪನಿಯಿಂದ ಸಮಾಜದ ಸ್ವಾವಲಂಬಿಗೆ ಪೂರಕವಾಗಲಿ ಎಂದರು.

ತಾಪಂ ಇಒ ಎನ್. ಆರ್. ಹೆಗಡೆ, ಆಡಳಿತಾಧಿಕಾರಿ ನಟರಾಜ ಟಿ.ಎಚ್., ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಾಸಣಗಿ ಗ್ರಾಪಂ ಅಧ್ಯಕ್ಷೆ ವಿನೋದಾ ಪೂಜಾರಿ, ಕಂಪನಿ ಅಧ್ಯಕ್ಷೆ ನರ್ಮದಾ ನಾಯ್ಕ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಬ್ರಾಯ ಭಟ್ಟ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯಕ ಹಾಗೂ ಮಹಿಳಾ ಕಂಪನಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net