ಹೊಟ್ಟು, ಮೇವಿನ ಬಣವೆಗೆ ಬೆಂಕಿ

17 NRD-2A
Published on

ವಿಜಯವಾಣಿ ಸುದ್ದಿಜಾಲ ನರಗುಂದ

ವಿದ್ಯುತ್ ತಂತಿ ರ್ಸ³ಸಿ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಹೊಟ್ಟು, ಮೇವಿನ ಬಣವೆ ಸುಟ್ಟು ಕರಕಲಾದ ಘಟನೆ ತಾಲೂಕಿನ ಶಿರೋಳ ಗ್ರಾಮದಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ.

ಗ್ರಾಮದ ಮಲ್ಲಪ್ಪ ಈರಪ್ಪ ಚಂಗಳಿ ಎಂಬುವರು ಊರ ಮುಂದಿರುವ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ 11 ಟ್ರ್ಯಾಕ್ಟರ್​ನಷ್ಟು ಬಿಳಿ ಜೋಳದ ಮೇವು ಹಾಗೂ ಎರಡ್ಮೂರು ಟ್ರ್ಯಾಕ್ಟರ್ ಹೊಟ್ಟು ಬೆಂಕಿಗಾಹುತಿಯಾಗಿದೆ. ಗಾಳಿ ಬೀಸಿದ ಪರಿಣಾಮ ಬಣಿವೆಯ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳು ರ್ಸ³ಸಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳಕ್ಕೆ ನರಗುಂದ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ. ಅಂದಾಜು 1.50 ಲಕ್ಷ ರೂ. ಹಾನಿಯಾಗಿದೆ ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಸಂದೀಪ ಬಸರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net