ಯುವತಿಯರಿಗೆ ಒಂದೇ ಸೂರಿನಡಿ ಉದ್ಯೋಗ

03 SANDOOR 01
ಸಂಡೂರು ತಾಲೂಕು ತೋರಣಗಲ್‌ನ ಒಪಿಜೆ ಕೇಂದ್ರದಲ್ಲಿ ಮಹಿಳಾ ಗ್ರಾಮೀಣ ಬಿಪಿಒವನ್ನು ಜೆಎಸ್‌ಡಬ್ಲ್ಯು ಮುಖ್ಯಸ್ಥೆ ಸಂಗೀತಾ ಜಿಂದಾಲ್ ಉದ್ಘಾಟನೆ ಮಾಡಿದರು. ಜೆಎಸ್‌ಡಬ್ಲ್ಯುನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಪ್ರಮುಖರಾದ ದೇಬಬ್ರತ್ ಮಿಶ್ರ, ರಾಹುಲ್, ರಮೇಶ್ ಇತರರಿದ್ದರು.
Published on

ಸಂಡೂರು: ಉತ್ತರ ಕರ್ನಾಟಕದ ಅತಿದೊಡ್ಡ ಮಹಿಳಾ ಗ್ರಾಮೀಣ ಬಿಪಿಒ ಉದ್ಘಾಟನೆಯಾಗುತ್ತಿದ್ದು, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜೆಎಸ್‌ಡಬ್ಲ್ಯು ಮುಖ್ಯಸ್ಥೆ ಸಂಗೀತಾ ಜಿಂದಾಲ್ ಹೇಳಿದರು.

ತಾಲೂಕಿನ ತೋರಣಗಲ್‌ನ ಒಪಿಜೆ ಕೇಂದ್ರದಲ್ಲಿ ಮಹಿಳಾ ಗ್ರಾಮೀಣ ಬಿಪಿಒವನ್ನು ಜೆಎಸ್‌ಡಬ್ಲ್ಯು ಮುಖ್ಯಸ್ಥೆ ಸಂಗೀತಾ ಜಿಂದಾಲ್ ಸೋಮವಾರ ಉದ್ಘಾಟನೆ ಮಾಡಿ ಮಾತನಾಡಿದರು.

ಜೆಎಸ್‌ಡಬ್ಲ್ಯು ಫೌಂಡೇಷನ್ ನೆರವಿನ ಬಿಪಿಒ ಒಟ್ಟು 312 ಗ್ರಾಮೀಣ ಯುವತಿಯರಿಗೆ ಒಂದೇ ಸೂರಿನಡಿ ಉದ್ಯೋಗ ನೀಡಿದೆ. ಇದನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಿದ್ದು, ಡೇಟಾ ಭದ್ರತೆ, ಬಹು-ಭಾಷಾ ಸಂಪರ್ಕ, ಧ್ವನಿ, ಚಾಟ್, ಇ-ಮೇಲ್ ಮತ್ತು ಸಾಮಾಜಿಕ ಮಾಧ್ಯಮ ಸೇರಿ ವಿವಿಧ ಸೇವೆಗಳು ಲಭಿಸಲಿವೆ. ಗ್ರಾಮೀಣ ಮಹಿಳೆಯರು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಸಂಪೂರ್ಣ ಬಿಪಿಒ ನಿರ್ವಹಣೆಯನ್ನು ಜೆಎಸ್‌ಡಬ್ಲ್ಯು ಶಕ್ತಿ ಫೌಂಡೇಷನ್ ನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಯುವತಿಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶವನ್ನು ಹೊಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net