ಅನೇಕ ಯುವ ಗಾಯಕರಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರೇರಣೆ

Hanumasagara SPB Nudinamana
ಹನುಮಸಾಗರದ ಕುರುಬಗೇರಾ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಕಸಾಪ ಸ್ಥಳೀಯ ಘಟಕದಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನುಡಿನಮನ ಸಲ್ಲಿಸಲಾಯಿತು.
Published on

ಹನುಮಸಾಗರ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಅನೇಕ ಯುವ ಗಾಯಕರಿಗೆ ಪ್ರೇರಣೆಯಾಗಿದ್ದಾರೆಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಚಂದಪ್ಪ ಹಕ್ಕಿ ಹೇಳಿದರು.

ಪಟ್ಟಣದ ಕುರುಬಗೇರಾ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಸಂಜೆ ಕಸಾಪ ಸ್ಥಳೀಯ ಘಟಕದಿಂದ ಆಯೋಜಿಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನುಡಿನಮನ ಸಭೆಯಲ್ಲಿ ಮಾತನಾಡಿದರು. 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಕೀರ್ತಿ ಎಸ್‌ಪಿಬಿಗೆ ಸಲ್ಲುತ್ತದೆ. ಸಂಗೀತ ಪ್ರಿಯರಿಗೆ ಒಂದು ಜೀವಮಾನದಲ್ಲಿ ಕೇಳಿ ಮುಗಿಸಲಾಗದಷ್ಟು ಸುಮಧುರ ಹಾಡುಗಳನ್ನು ಹಾಡಿದ್ದಾರೆ ಎಂದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಪದಾಧಿಕಾರಿಗಳಾದ ಭರಮಪ್ಪ ಕಂಡೆಕಾರ, ಏಕನಾಥ ಮೆದಿಕೇರಿ, ಬಾಳಪ್ಪ ಗುಡಗದ್ದಿ, ಗ್ಯಾನಪ್ಪ ತಳವಾರ, ಈರಣ್ಣ ವಿಶ್ವಕರ್ಮ, ಮಂಜುನಾಥ ಗುಳೆದಗುಡ್ಡ, ಮಹ್ಮದ್ ಖಾಜಿ, ಯಲ್ಲಪ್ಪ ಜಿಗಳೂರ, ಬಾಳಪ್ಪ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net