ಕಾರ್ಮಿಕರಿಗೆ ಧನಸಹಾಯ ನೀಡಿದ ಜಯಶೀಲ ಶೆಟ್ಟಿ

01GPB-02-Web
ಘಟಪ್ರಭಾದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಲ್ಲಿಕಾರ್ಜುನ ಶ್ರೀ ಸಹಾಯಧನ ವಿತರಿಸಿದರು. ಜಯಶೀಲ ಶೆಟ್ಟಿ, ಡಿ.ಎಂ. ದಳವಾಯಿ, ಸುಧೀರ ಜೋಡಟ್ಟಿ, ಎಸ್.ಎಂ. ಗಡಕರಿ ಇದ್ದರು.
Published on

ಘಟಪ್ರಭಾ: ಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ಪ್ರಥಮ ದರ್ಜೆ ಗುತ್ತಿಗೆದಾರ ಜಯಶೀಲ ಶೆಟ್ಟಿ ಅವರು ಘಟಪ್ರಭಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಲ್ಲಾಪುರ ಪಿ.ಜಿ. ಪಟ್ಟಣ ಪಂಚಾಯಿತಿ ಮತ್ತು ದುಪದಾಳ ಗ್ರಾಪಂ ಕಾರ್ಮಿಕರು ಸೇರಿ 125 ಜನರಿಗೆ 1000 ರೂ.ದಂತೆ 1 ಲಕ್ಷ 25 ಸಾವಿರ ಧನ ಸಹಾಯ ನೀಡಿದರು.

ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀ ಮಾತನಾಡಿ, ಶ್ರೀಮಂತಿಕೆಗೆ ಗೌರವ ಬರುವುದೇ ಇನ್ನೊಬ್ಬರಿಗೆ ಸಹಾಯ ಮಾಡಿದಾಗ. ತಮ್ಮ ಹತ್ತಿರ ಇದ್ದುದರಲ್ಲಿಯೇ ಇನ್ನೊಬ್ಬರಿಗೆ ಸಹಾಯ ಮಾಡಿದರೆ ಅಂತಹ ವ್ಯಕ್ತಿ ಎಂದೂ ಬಡವನಾಗುವುದಿಲ್ಲ. ಇಂದು ದೇಶಕ್ಕೆ ಒಕ್ಕರಿಸಿರುವ ಮಹಾಮಾರಿ ಕರೊನಾ ರೋಗ ತಡೆಗಟ್ಟಲು ಶ್ರಮಿಸುತ್ತಿರುವ ಆಶಾ-ಅಂಗನವಾಡಿ, ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಎಸ್.ಐ. ಬೆನವಾಡಿ, ಘಟಪ್ರಭಾ ಪಿಎಸ್‌ಐ ಹಾಲಪ್ಪ ಬಾಲದಂಡಿ, ಡಿ.ಎಂ. ದಳವಾಯಿ, ಸುಧೀರ ಜೋಡಟ್ಟಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ.ಗಡಕರಿ, ಡಿ.ಎಸ್. ಬೆಲ್ಲದ, ಅಶೋಕ ನಾಯಿಕ, ಗಜಾನನ ಗಾಂವ್ಕರ, ಕರಬಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net