ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಆಯೋಜನೆ

13Athani2
ಅಥಣಿ ಇನ್ನರವ್ಹೀಲ್ ಕ್ಲಬ್‌ನ ರಜತ ಮಹೋತ್ಸವ ಕುರಿತು ಹಮ್ಮಿಕೊಂಡಿರುವ ವಿವಿಧ ಸ್ಪರ್ಧೆಗಳ ಕರಪತ್ರವನ್ನು ಗಣ್ಯರು ಬಿಡುಗಡೆ ಮಾಡಿದರು. ಗಜಾನನ ಮಂಗಸೂಳಿ, ಅರುಣ ಯಲಗುದ್ರಿ, ಇತರರಿದ್ದರು.
Published on

ಅಥಣಿ: ರೋಟರಿ ಕ್ಲಬ್‌ನ ಅಂಗ ಸಂಸ್ಥೆಯಾದ ಇನ್ನರ್‌ವ್ಹೀಲ್ ಕ್ಲಬ್‌ಗೆ 25ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು. ಸ್ಥಳೀಯ ಗುಜರಾತಿ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 25ವರ್ಷಗಳಿಂದ ಮಹಿಳೆಯರ ಸಬಲೀಕರಣಕ್ಕಾಗಿ ಇನ್ನರ್‌ವ್ಹೀಲ್ ಕ್ಲಬ್ ಶ್ರಮಿಸುತ್ತಿದೆ. ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ, ಕೇಶವಿನ್ಯಾಸ ಸ್ಪರ್ಧೆ ಕಾರ್ಯಕ್ರಮಗಳನ್ನು ಪಟ್ಟಣದ ಐಎಂಎ ಹಾಲ್ ಮತ್ತು ಆರ್.ಎಚ್.ಕುಲಕರ್ಣಿ ಸಭಾಭವನದಲ್ಲಿ ನ.16 ಮತ್ತು 17ರಂದು ಬೆಳಗ್ಗೆ 11ಗಂಟೆಗೆ ಜರುಗಲಿವೆ ಎಂದರು. ಅರುಣ ಯಲಗುದ್ರಿ ದೀಪಕ ಪಾಟೀಲ, ಭರತ ಸೋಮಯ್ಯ, ಅನಿಲ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net