ವೀರಶೈವರಿಗೆ ಶಿವಯೋಗ ಸಾಧನೆಯೇ ಶ್ರೇಷ್ಠ

7 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀಗುರುವಿನ ಕೃಪಾಕಾರುಣ್ಯದೊಂದಿಗೆ ಪಡೆದ ಇಷ್ಟಲಿಂಗವನ್ನು ದೇಹದ ಮೇಲೆ ಶಾಶ್ವತವಾಗಿ ಧಾರಣೆಮಾಡಿಕೊಂಡು ನಿತ್ಯದಲ್ಲಿ ಇಷ್ಟಲಿಂಗಾರ್ಚನೆ ನಡೆಸುವ ವೀರಶೈವರಿಗೆ ಶಿವಯೋಗ ಸಾಧನೆಯೇ ಶ್ರೇಷ್ಠವಾದದ್ದು ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಭಾವಿ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಲಿಂ. ಶ್ರೀ ಗುರುಶಾಂತಲಿಂಗ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ ಭಾನುವಾರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಯೋಗ ಸಾಧನೆಯು ಚಿತ್ತ ಶುದ್ಧಿಗೆ ಕಾರಣ. ಶಿವಯೋಗ ಸಾಧನೆಗೆ ಮನಸ್ಸನ್ನು ಏಕಾಗ್ರತೆಯಲ್ಲಿ ಅಣಿಗೊಳಿಸಲು ಇಷ್ಟಲಿಂಗದ ಮುಖೇನ ಅನನ್ಯ ಭಕ್ತಿಯಿಂದ ನಡೆಸುವ ಶಿವಪಂಚಾಕ್ಷ ರಿ ಮಹಾಮಂತ್ರದ ಅನುಸಂಧಾನವೇ ಮೂಲ ಕಾರಣವಾಗುತ್ತದೆ ಎಂದರು.
ಶ್ರೀಗಳ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂತನಾಂಬರ ಧಾರಣೆ, ನೂರೊಂದು ಬಿಲ್ವಾರ್ಚನೆ, ಪುಷ್ಪ ಅಲಂಕಾರಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net