ವಿವಿಧ ರಾಜ್ಯಗಳಿಗೆ ಕರ್ನಾಟಕ ಮಾದರಿ

18kudachi1
Published on

ಕುಡಚಿ: ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ನೂರು ವರ್ಷ ಪೂರೈಸಿದ್ದು, ಅವರ ಸ್ಮರಣೆ ಕಾರ್ಯಕ್ರಮವನ್ನು ಜ.21ರಂದು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎ.ಸಿ.ಶ್ರೀನಿವಾಸ ತಿಳಿಸಿದರು.

ಪಟ್ಟಣದ ಖಾಸಗಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯದ ಮುಖಂಡರು, ಸಚಿವರು, ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಂಬೇಡ್ಕರ ಅವರ ಕೊಡುಗೆಯ ಸಂವಿಧಾನದ ಲವಾಗಿ ಅನೇಕರು ಶಾಸಕರು ಹಾಗೂ ಸಚಿವರಾಗಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೇ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ. ವಿವಿಧ ರಾಜ್ಯಗಳಿಗೆ ಕರ್ನಾಟಕ ಮಾದರಿ. ಸರ್ಕಾರ ಗ್ಯಾರಂಟಿ ನೀಡುತ್ತ ಅಭಿವೃದ್ಧಿ ಮುಂದುವರಿಸುತ್ತಿದೆ ಎಂದರು. ಶಾಸಕ ಮಹೇಂದ್ರ ತಮ್ಮಣ್ಣವರ, ಪುರಸಭೆ ಅಧ್ಯಕ್ಷ ಹಮಿಧೋದ್ದಿನ್ ರೋಹಿಲೆ, ಸಹಧೀಕ್ ಸಜ್ಜನ್, ಮಹಾದೇವ ಖಟಕಬಾವಿ, ಮುಶ್ಪಿಕ್ ಜಿನ್ನಾಬಡೆ, ಸಾಯಬಲಾಲ್ ರೋಹಿಲೆ, ಆನಂದ ಪಾಟೀಲ, ಜಸ್‌ಮೀನ್ ಅಲಾಸೆ, ಪ್ರದೀಪ ಹಾಲ್ಗೂಣಿ, ಲಲಿತಾ ಪೀಡಾಯಿ, ಅಬ್ದುಲ್‌ಖಾದರ ರೋಹಿಲೆ, ಮುರಾರಿ ಬಾನೆ, ಕಲ್ಲಪ್ಪ ಬಡಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net