ಉರುಸ್‌ಗೆ ಅದ್ದೂರಿ ಚಾಲನೆ

4
ರಾಯಬಾಗ ತಾಲೂಕಿನ ಮಾರಡಿ (ಮಾಡಲಗಿ) ಗ್ರಾಮದ ಭರಮದೇವರ ಗುಡಿಯಿಂದ ಮಾಜಿಯಾ ಬಾಬಾ ದರ್ಗಾವರೆಗೆ ವಾದ್ಯಮೇಳದೊಂದಿಗೆ ಸುಮಂಗಲೆಯರ ಕುಂಭಮೇಳ ಹಾಗೂ ಪಲ್ಲಕ್ಕಿ ಮೆರವಣಿಗೆ ಜರುಗಿತು.
Published on

ರಾಯಬಾಗ: ತಾಲೂಕಿನ ಮಾರಡಿ (ಮಾಡಲಗಿ) ಗ್ರಾಮದ ಹಿಂದು-ಮುಸ್ಲಿಂ ಭಾವೈಕ್ಯ ಕೇಂದ್ರವಾದ ಹಜರತ್ ಸಯ್ಯದಯಾ ಮಾಜಿಯಾ ಬಾಬಾ ಖಾದ್ರಿ ಉರುಸ್ ಮಂಗಳವಾರ ವಿಜೃಂಭಣೆಯಿಂದ ಪ್ರಾರಂಭಗೊಂಡಿತು.

ಮಧ್ಯಾಹ್ನ ಗ್ರಾಮದ ಭರಮದೇವರ ಗುಡಿಯಿಂದ ಮಾಜಿ ಬಾಬಾ ದರ್ಗಾವರೆಗೆ ವಾದ್ಯಮೇಳದೊಂದಿಗೆ ಸುಮಂಗಲೆಯರ ಕುಂಭಮೇಳ ಹಾಗೂ ಪಲ್ಲಕ್ಕಿ ಮೆರವಣಿಗೆ ಜರುಗಿತು. ನಂತರ ಭಕ್ತಾದಿಗಳು ಮಹಾಪ್ರಸಾದ ಸ್ವೀಕರಿಸಿದರು. ಮೇ 15ರಂದು ರಾತ್ರಿ 8 ಗಂಟೆಗೆ ಕಬ್ಬೂರ ಮತ್ತು ಅಮ್ಮಣಗಿ ಗ್ರಾಮದವರಿಂದ ರಿವಾಯತ್ ಪದಗಳು ಜರುಗಲಿವೆ.

16ರಂದು ರಾತ್ರಿ 10 ಗಂಟೆಗೆ ಬೆಳಗಾವಿಯ ಮೋಸಿನ ಕಿಸ್ತಿ ಹಾಗೂ ಬೆಂಗಳೂರಿನ ಸಿಮ್ರನ್ ತಾಜ್ ಅವರಿಂದ ಕವಾಲಿ ಕಾರ್ಯಕ್ರಮ ನಡೆಯಲಿದೆ. ಮೇ 17ರಂದು ರಾತ್ರಿ 10 ಗಂಟೆಗೆ ಲಪಂಗ್ ರಾಜಾ ತಂಡದರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಜರುಗಲಿದೆ.

ಶದ್ರದ್ದೀನ್ ಷಾ ಖಾದ್ರಿ, ಮೌನುದ್ದೀನ್ ಷಾ ಖಾದ್ರಿ, ಭರಮನಂದ ಚೌಗಲಾ, ಮಂಜುನಾಥ ಅರಿಕೇರಿ, ಕಲ್ಲಪ್ಪ ಆಕಳೆ, ಹಾಲಪ್ಪ ಜರಳಿ, ವಸಚಿತ ಖಾಂಡೇಕರ, ವಿಠಲ ಯಾದಗೂಡೆ, ಅಸ್ಲಾಂ ಪೆಂಡಾರಿ, ಸಂತೋಷ ಮಸಾಳೆ, ರಾಕೇಶ ಸುಳ್ಳನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net