ಉಮರಾಣಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸನ್ಮಾನ

6ravig7-Web
ನಡೆದಾಡುವ ಕಂಪ್ಯೂಟರ್ ಎಂದೇ ಖ್ಯಾತರಾದ ಅಥಣಿ ತಾಲೂಕಿನ ಬಸವರಾಜ ಉಮರಾಣಿ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸತ್ಕರಿಸಿದರು. ಕಲಾವಿದ ಸಿದ್ದು ಇಟಗಿ ಇತರರಿದ್ದರು.
Published on

ಬೆಳಗಾವಿ: ಅದ್ಭುತ ಸ್ಮರಣಶಕ್ತಿಗೆ ಹೆಸರಾಗಿರುವ, ನಡೆದಾಡುವ ಕಂಪ್ಯೂಟರ್ ಎಂದೇ ಖ್ಯಾತರಾದ ಅಥಣಿ ತಾಲೂಕಿನ ಬಸವರಾಜ ಉಮರಾಣಿ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸತ್ಕರಿಸಿದರು.

ಬಸವರಾಜ ಉಮರಾಣಿ ಅವರು ಹುಟ್ಟು ಅಂಧರಾಗಿದ್ದು, ತಮ್ಮ ಅತ್ಯುನ್ನತ ಬುದ್ಧಿ ಹಾಗೂ ನೆನಪಿನ ಶಕ್ತಿಯನ್ನು ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಹೊರದೇಶಗಳಲ್ಲಿಯೂ ಅನಾವರಣಗೊಳಿಸಿದ್ದಾರೆ. ಇತ್ತೀಚಿಗೆ ಇವರು ದುಬೈ (ಅರಬ್ ಯುನೈಟೆಡ್ ಎಮಿರೇಟ್ಸ್ )ಗೆ ಹೋಗಿ ಅಲ್ಲಿನ ರಾಜ ಶೇಖ್ ಮೊಹಮ್ಮದ್ ಅವರನ್ನು ಭೇಟಿ ಮಾಡಿ, ತಮ್ಮ ಪ್ರತಿಭೆ ಪ್ರದರ್ಶಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿ ಅವರಿಂದ ಸನ್ಮಾನಿತರಾಗಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಬಸವರಾಜ ಉಮರಾಣಿಯವರ ಜತೆಗೆ ಕಲಾವಿದ, ಚಿತ್ರಕಲಾ ಶಿಕ್ಷಕ ಸಿದ್ದು ಇಟಗಿ ಅವರೂ ಸಹ ಕಲಾ ಕೌಶಲ ಪ್ರದರ್ಶಿಸಿದರು. ತಮ್ಮ ಕೈಚಳಕದೊಂದಿಗೆ ಹೆಬ್ಬಾಳಕರ್ ಹುಟ್ಟಿದ ದಿನಾಂಕದ ಮೂಲಕ ಕೆಲವೇ ಕ್ಷಣಗಳಲ್ಲಿ ಅವರ ಭಾವಚಿತ್ರ ಬಿಡಿಸಿ ವಿಸ್ಮಯ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net