ಚಿಕಿತ್ಸೆಗೆ ಕೆಎಲ್‌ಇ ಹೆಸರುವಾಸಿ

2Manjari1
ಕೊಲ್ಲಾಪುರ ಜಿಲ್ಲೆಯ ಶಿರೋಳ ಗ್ರಾಮದ ದತ್ತ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮೇಘತಾಯಿ ಪಾಟಕರ ಅವರಿಗೆ ಅಪ್ಪಾಸಾಹೇಬ ಪಾಟೀಲ ಸಮಾಜ ಭೂಷಣ ಪುರಸ್ಕಾರವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ವಿತರಿಸಿದರು. ಮಹಾಂತೇಶ ಕವಟಗಿಮಠ, ಗಣಪತರಾವ ಪಾಟೀಲ ಇತರರಿದ್ದರು.
Published on

ಮಾಂಜರಿ: ನೂರು ವರ್ಷಗಳ ಹಿಂದೆ ಸಪ್ತಋಷಿಗಳ ತ್ಯಾಗದಿಂದ ಸ್ಥಾಪನೆಯಾದ ಬೆಳಗಾವಿಯ ಕೆಎಲ್‌ಇ ಸಂಸ್ಥೆ ಸಾಮಾಜಿಕ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಿದೆ. ಭಾಷೆ, ಭೇದ-ಭಾವವಿಲ್ಲದೆ ಎಲ್ಲ ಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡುತ್ತಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಸಮೀಪದ ಶಿರೋಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಕ ಅಪ್ಪಾಸಾಹೇಬ (ಉರ್ಫ್ ಸಾರೆ) ಪಾಟೀಲ

ಅವರ 9ನೆಯ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಎಲ್‌ಇ ಸಂಸ್ಥೆ ಅಂದಾಜು 312 ಸಂಸ್ಥೆ ನಡೆಸುತ್ತಿದೆ. 1,48,000 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಳಗಾವಿಯಲ್ಲಿ 5,500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಿದೆ. ಎಲ್ಲ ತರಹದ ಆರೋಗ್ಯ ಸೇವೆ ಲಭ್ಯ ಎಂದರು.

ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಪ್ರತಿವರ್ಷದಂತೆ ಕೊಡ ಮಾಡುವ ಅಪ್ಪಾಸಾಹೇಬ ಪಾಟೀಲ ಸಮಾಜ ಭೂಷಣ ಪುರಸ್ಕಾರವನ್ನು ನರ್ಮದಾ ಬಚಾವ್ ಆಂದೋಲನ ಪ್ರಮುಖರಾದ ಮೇಘತಾಯಿ ಪಾಟಕರಗೆ, ದ್ರಾಕ್ಷಿ ಬೆಳೆಯಲ್ಲಿ ಯಶಸ್ಸು ಕಂಡ ನಾಶಿಕದಲ್ಲಿರುವ ಸೈಯಾದ್ರಿ ಇಂಡಸ್ಟ್ರೀಜ್‌ನ ವಿಲಾಸರಾವ್ ಶಿಂಧೆ ಹಾಗೂ ಒಲಿಂಪಿಕ್ ಸ್ಪರ್ಧೆಯಲ್ಲಿ ಕಂಚು ಪದಕ ಪಡೆದ ಕೊಲ್ಲಾಪುರ ಜಿಲ್ಲೆಯ ಸ್ವಪ್ನಿಲ್ ಕುಸಾಳೆಗೆ ಡಾ. ಪ್ರಭಾಕರ ಕೋರೆ ಪ್ರಶಸ್ತಿ ನೀಡಿ ಗೌರವಿಸಿದರು.

ಗಣಪತರಾವ ಪಾಟೀಲ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಘುನಾಥರಾವ ಪಾಟೀಲ, ಉಪಾಧ್ಯಕ್ಷ ಇಂದ್ರಜಿತ್ ಪಾಟೀಲ, ಅಮರ ಯಾದವ, ಅರುಣ ದೇಸಾಯಿ, ಜ್ಯೋತಿಗೌಡ ಪಾಟೀಲ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆನ್ನವರ, ಶಾಸಕ ಅಶೋಕ ಕಾಂಬಳೆ, ಅನಿಲ ಯಾದವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net