ಕಂಪ್ಲಿ: ಪಟ್ಟಣದ 15ನೇ ವಾರ್ಡ್ ಜೈನ ಮಂದಿರ ಓಣಿಯಲ್ಲಿ ಕೆಲ ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಇದನ್ನು ಓದಿ: ದಿನವಿಡೀ ದುಡಿಮೆ, ರಾತ್ರಿ ನೀರು ಹಿಡಿವ ಕಾಯಕ
ಎರಡು ದಿನಕ್ಕೊಮ್ಮೆ ಒಂದು ತಾಸು ಮಾತ್ರ ನೀರು ಪೂರೈಸುತ್ತಿದ್ದು, ಅದೂ ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ಅಲ್ಲದೆ, ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಇದರಿಂದ ತೊಂದರೆಯಾಗಿದೆ.
ಬೇರೆಡೆ ತೆರಳಿ ನೀರು ತರುವಂತಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಪುರಸಭೆ ಆಡಳಿತ ಕಾಳಜಿ ತೋರಬೇಕು. ಉದಾಸೀನ ತೋರಿದರೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳಾದ ಕೊಟ್ರಪ್ಪ, ಪ್ರಕಾಶ, ಗುರು, ಶಾಂತಾ, ಶಶಿಕಲಾ, ಸುಶೀಲಮ್ಮ, ಕಮಲಮ್ಮ, ಸಿದ್ದಮ್ಮ ಎಚ್ಚರಿಸಿದ್ದಾರೆ.
ಪುರಸಭೆ ಜೆಇ ಮೇಘನಾ ಪ್ರತಿಕ್ರಿಯಿಸಿ, ಮೇ 9ಕ್ಕೆ ನೀರು ಪೂರೈಸಲಾಗಿತ್ತು. ನಂತರ ಮೇ 11ಕ್ಕೆ ನೀರು ಪೂರೈಸಬೇಕಿತ್ತು. ಆದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ನೀರು ಪೂರೈಸಿಲ್ಲ.
ಜೈನ ಮಂದಿರ ಪ್ರದೇಶ ಭೌಗೋಳಿಕವಾಗಿ ಎತ್ತರದಲ್ಲಿದ್ದು ಸಮರ್ಪಕ, ಒತ್ತಡದ ನೀರು ಪೂರೈಸಲು ಮೇಲ್ತೊಟ್ಟಿ ಭರ್ತಿಯಾದಲ್ಲಿ ಮಾತ್ರ ಸಾಧ್ಯ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಿರುವುದರಿಂದ ಮೇಲ್ತೊಟ್ಟಿ ಭರ್ತಿಯಾಗಿಲ್ಲ. ಮೇ 13ರಂದ ಸಮರ್ಪಕವಾಗಿ ನೀರು ಪೂರೈಸಲಾಗುವುದು. ಜನರು ನೀರನ್ನು ಸಂಗ್ರಹಿಸಿಟ್ಟುಕೊಂಡು ಮಿತವಾಗಿ ಬಳಕೆ ಮಾಡಬೇಕು. ವ್ಯರ್ಥವಾಗಿ ಪೋಲು ಮಾಡಬಾರದು ಎಂದು ತಿಳಿಸಿದ್ದಾರೆ.