ರೈತಪರ ಕಾಳಜಿಯುಳ್ಳವರಿಗೆ ಮಣೆ

24manju7
Published on

ಮೂಡಲಗಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ (ಬೆಮುಲ್​) ನಿರ್ದೇಶಕ ಸ್ಥಾನಕ್ಕೆ ಭಗೀರಥ& ಉಪ್ಪಾರ ಸಮುದಾಯಕ್ಕೆ ಸೇರಿದ ರೈತಪರ

ಕಾಳಜಿಯುಳ್ಳ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ಬೆಮುಲ್​ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಭೀಮವ್ವ ಲ$್ಮಣರಾವ್​ ಜಾರಕಿಹೊಳಿ ಮೆಮೋರಿಯಲ್​ ಚಾರಿಟಬಲ್​ ಟ್ರಸ್ಟ್​ ಮತ್ತು ಕಪರಟ್ಟಿ&ಕಳ್ಳಿಗುದ್ದಿ ಮಠ ಆಷಾಢ ಮಾಸದ ಅಂಗವಾಗಿ ಗುರುವಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥರ ಪೂಜೆ ಮತ್ತು ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಉಪ್ಪಾರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಬೆಮುಲ್​ನಲ್ಲಿ ಉಪ್ಪಾರ ಸಮುದಾಯದವರನ್ನು ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಪ್ರಾಶಸ್ತ್ಯ ನೀಡಲಾಗುವುದು. ನಮ್ಮ ಕುಟುಂಬ ರಾಜಕೀಯ, ಸಹಕಾರ ಹಾಗೂ ಸಾಮಾಜಿಕ ೇತ್ರಗಳಲ್ಲಿ ಸೇವೆ ಸಲ್ಲಿಸಲು ಭಗೀರಥ ಉಪ್ಪಾರ ಸಮುದಾಯ ಸೇರಿ ಎಲ್ಲ ವರ್ಗದವರು ಬೆಂಬಲ ನೀಡುತ್ತಾ ಬಂದಿದ್ದಾರೆ. ಜತೆಗೆ ಮೂಡಲಗಿ& ಗೋಕಾಕ ೇತ್ರದಲ್ಲಿರುವ ಎಲ್ಲ ಸಮುದಾಯದ ಜನರು ಪ್ರೀತಿ& ವಿಶ್ವಾಸ ತೋರಿಸುತ್ತಿದ್ದಾರೆ ಎಂದರು.

ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾ ನಂದಪುರಿ ಸ್ವಾಮೀಜಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಕುಟುಂಬ ದೊಡ್ಡ ಶಕ್ತಿಯಾಗಿ ನಮ್ಮ ಸಮುದಾಯ ಆಶೋತ್ತರ ಈಡೇರಿಸುತ್ತಿದ್ದಾರೆ. ಭಗೀರಥ ಪೀಠದ ಅಭಿವೃದ್ಧಿಗೆ ಪ್ರತಿ ಹಂತದಲ್ಲೂ ತನು,ಮನ ಹಾಗೂ ಧನ ಸೇವೆ ಸಲ್ಲಿಸುವ ಮೂಲಕ ಸೇವಾ ಕಾರ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದರು.

ಒಮ್ಮತದ ಅಭ್ಯರ್ಥಿ ಕಣಕ್ಕೆ: ಬಿಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕುಗಳ ವಿವಿಧ ಸಮುದಾಯದ ಪ್ರಮುಖರ ಸಭೆ ಕರೆಯಲಾಗುವುದು. ಉಭಯ ತಾಲೂಕಿನ ಎರಡೂ ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿ ಹಾಕಲಾಗುವುದು. ರೈತರ ಕಷ್ಟಕ್ಕೆ ಸ್ಪಂದಿಸುವ ಜನಪರ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಮಸಗುಪ್ಪಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶತ ಸಂಭ್ರಮ ಆಚರಿಸುತ್ತಿದ್ದು, ಅದನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಕಪರಟ್ಟಿ& ಕಳ್ಳಿಗುದ್ದಿ ಮಠದ ಬಸವರಾಜ ಸ್ವಾಮೀಜಿ, ಖಡಕಭಾವಿಯ ಧರೇಶ್ವರ ಸ್ವಾಮೀಜಿ. ಯುವ ಮುಖಂಡ ಸವೋರ್ತ್ತಮ ಜಾರಕಿಹೊಳಿ ಇತರರಿದ್ದರು.

ನಾಲ್ವರು ಶಾಸಕರು, ಒಬ್ಬ ಸಂಸದರು

ನಮ್ಮ ಒಂದೇ ಕುಟುಂಬದಲ್ಲಿ ಏಕಕಾಲಕ್ಕೆ ನಾಲ್ವರು ಶಾಸಕರು ಮತ್ತು ಒಬ್ಬರು ಸಂಸತ್​ ಸದಸ್ಯರನ್ನಾಗಿ ಜನರು ಆಯ್ಕೆ ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದು ಕುಟುಂಬ ರಾಜಕಾರಣವಲ್ಲ. ಜನರೇ ನಮಗೆ ಅಧಿಕಾರ ನೀಡುತ್ತ ಆಶೀರ್ವದಿಸುತ್ತಿದ್ದಾರೆ. ಹೀಗಾಗಿ, ಜನರಿಗೆ ನಮ್ಮ ಕುಟುಂಬ ಸದಾ ಚಿರಋಣಿ ಯಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net