ರಂಗಭೂಮಿಗೆ ಬೇಕಿದೆ ಕಾಯಕಲ್ಪ

17
ತೆಲಸಂಗ ಗ್ರಾಮದಲ್ಲಿ ವತ್ತಿ ರಂಗಭೂಮಿ ಕಲಾವಿದೆಯರನ್ನು ಸತ್ಕರಿಸಲಾಯಿತು. ಡಾ.ಬಿ.ಎಸ್.ಕಾಮನ್, ಸ್ವಪ್ನಾ ವಿಜಯಪುರ, ಭವ್ಯಾ ಬುದ್ನಿ, ಸಿದ್ದಲಿಂಗ ಮಾದರ, ಗಪುರ್ ಮುಲ್ಲಾ ಇದ್ದರು.
Published on

ತೆಲಸಂಗ: ವತ್ತಿ ರಂಗಭೂಮಿ ಇಂದು ಸೋತಿದ್ದು, ಅದೆಷ್ಟೋ ವತ್ತಿ ನಾಟಕ ಕಂಪನಿಗಳು ಬಾಗಿಲು ಮುಚ್ಚಿವೆ. ರಂಗಭೂಮಿಯ ಕಾಯಕಲ್ಪಕ್ಕೆ ಚಿಂತಿಸಬೇಕಿದೆ ಎಂದು ಹವ್ಯಾಸಿ ಕಲಾವಿದ ಡಾ.ಬಿ.ಎಸ್.ಕಾಮನ್ ಹೇಳಿದರು.

ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನದಲ್ಲಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ರಂಗ ಸಂಸ್ಥೆಯಿಂದ ವತ್ತಿ ರಂಗಭೂಮಿ ಕಲಾವಿದೆಯರನ್ನು ಸತ್ಕರಿಸಿ ಅವರು ಮಾತನಾಡಿದರು.

ನಾಟಕ ಕಂಪನಿಗಳ ಮತ್ತು ಕಲಾವಿದರ ಆರ್ಥಿಕ ಪರಿಸ್ಥಿತಿ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಿದ್ದರಿಂದ ಕಲಾವಿದರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೃತ್ತಿ ರಂಗಭೂಮಿ ಕಲಾವಿದೆಯರಾದ ಸ್ವಪ್ನಾ ವಿಜಯಪುರ, ಭವ್ಯಾ ಬುದ್ನಿ, ಗೀತಾ ಬಾದಾಮಿ ಅವರನ್ನು ಸತ್ಕರಿಸಲಾಯಿತು. ಗ್ರಾಪಂ ಸದಸ್ಯ ಸಿದ್ದಲಿಂಗ ಮಾದರ, ರವಿ ಕವಟಗಿ, ಗಪುರ್ ಮುಲ್ಲಾ, ಪುಟ್ಟು ವಳಸಂಗ, ಧರೆಪ್ಪ ಮಾಳಿ, ರಾಜು ಸಾಗರ, ಆನಂದ ಥೈಕಾರ, ರಾಜು ಹೊನಕಾಂಬಳೆ, ಸುನೀಲ ಉಂಡೋಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net