ರಂಗಭೂಮಿಗೆ ಶಿವಕುಮಾರಿ ಕೋಡುಗೆ ಅಪಾರ

13 ylb 1
ರಂಗಭೂಮಿ ಕಲಾವಿದೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಿ.ಶಿವಕುಮಾರಿ ಕೂಡ್ಲಿಗಿ ನಿಧನಕ್ಕೆ ಯಲಬುರ್ಗಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಂಗಭೂಮಿ ಕಲಾವಿದರ ಸಂಘದ ತಾಲೂಕು ಘಟಕದಿಂದ ಸಂತಾಪ ಸೂಚಿಸಲಾಯಿತು. ಕಲಾವಿದರಾದ ಕಳಕಪ್ಪ ತಳವಾರ್, ಶ್ರೀಕಾಂತಗೌಡ, ಮಂಜುನಾಥ, ನಟರಾಜ, ರುದ್ರಮುನಿ ಇದ್ದರು.
Published on

ಯಲಬುರ್ಗಾ: ರಂಗಭೂಮಿ ಕಲಾವಿದೆ ಬಿ.ಶಿವಕುಮಾರಿ ಕೂಡ್ಲಿಗಿ ನಿಧನಕ್ಕೆ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಂಗಭೂಮಿ ಕಲಾವಿದರ ಸಂಘದ ತಾಲೂಕು ಘಟಕದಿಂದ ಭಾನುವಾರ ಸಂತಾಪ ಸೂಚಿಸಲಾಯಿತು.

ರಂಗಭೂಮಿ ಕಲಾವಿದ ಕಳಕಪ್ಪ ತಳವಾರ್ ಮಾತನಾಡಿ, ಬಿ.ಶಿವಕುಮಾರಿ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಗೆ ಅಪಾರವಾದ ಕೋಡುಗೆ ನೀಡಿದ್ದಾರೆ. ಅವರ ನಿಧನದಿಂದ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಕಲಾವಿದ ಶ್ರೀಕಾಂತಗೌಡ ಮಾಲಿಪಾಟೀಲ್ ಮಾತನಾಡಿ, ಶಿವಕುಮಾರಿ ಕೂಡ್ಲಿಗಿ ಹಲವಾರು ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅವರಲ್ಲಿದ್ದ ಶ್ರದ್ಧೆ, ಸಂಮಯ ಬದ್ಧತೆ, ಶಿಸ್ತು ಇತರರಿಗೆ ಮಾದರಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net