ಯವಕರಿಗೆ ಬೆಳಕಾದ ಅದಮ್ಯ, ಅಜೇಯ

31 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿದವರ ಪರಂಪರೆಯಿಂದ ನಾವು ಪ್ರೇರಣೆ ಪಡೆಯಬೇಕು. ನನ್ನ ದೇಶ ಅಜೇಯವಾಗಿರಬೇಕೆಂಬ ಅದಮ್ಯ ಪ್ರೇರಣೆಯನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅಜೇಯ ಕೃತಿಗೆ ಸುವರ್ಣ ಸಂಭ್ರಮ ಹಾಗೂ ಅದಮ್ಯ ಕೃತಿಗೆ 40 ವರ್ಷ ರ್ಪೂಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೊತ್ಥಾನ ಬಳಗದಿಂದ ವೀರ ಸಾವರಕರ್​ ಬಳಗ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್​ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಜೇಯ ಹಾಗೂ ಅದಮ್ಯ ಕೃತಿಗಳು ಪರಿರ್ಪೂಣ ಕೃತಿಗಳಾಗಿವೆ. ಅಜೇಯದಲ್ಲಿ ಚಂದ್ರಶೇಖರ ಆಜಾದ್​ ಹಾಗೂ ಅದಮ್ಯದಲ್ಲಿ ವಾಸುದೇವ ಬಲವಂಥ ಫಡಕೆ ಅವರ ಜೀವನ ಪರಿಚಯ ಮಾಡಲಾಗಿದೆ. ಈ ಕೃತಿಗಳನ್ನು ಓದಿದರೆ ಸಾಕು ಅವರಿಬ್ಬರ ಜೀವನವೇ ನಮ್ಮ ಕಣ್ಣೆದುರಿಗೆ ಬರಲಿದೆ. ಅಷ್ಟು ಅದ್ಭುತವಾಗಿ ಲೇಖಕ ಬಾಬು ಕೃಷ್ಣಮೂರ್ತಿ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿ, ಧಾರವಾಡ ಸಂಗೀತ, ಸಾಹಿತ್ಯ, ಕಲೆಗೆ ಪ್ರಸಿದ್ಧಿಯಾಗಿದೆ. ಇಲ್ಲಿನ ವಾತಾವರಣ, ಪರಿಸರದಿಂದಲೇ ಸಾಹಿತಿಗಳು ಅತ್ಯುತ್ತಮ ಕೃತಿಗಳನ್ನು ಹೊರತರುವಂತಾಗಿದೆ. ಅಜೇಯ ಹಾಗೂ ಅದಮ್ಯ ಕೃತಿಗಳ ಪ್ರಸಿದ್ಧಿಗೆ ನಾನು ಕಾರಣನಲ್ಲ. ಇಲ್ಲಿನ ನಾನು ನಿಮಿತ್ತ ಮಾತ್ರ ಎಂದು ಕೊಂಡಿದ್ದೇನೆ. ಇದೇ ಕಾರಣಕ್ಕೆ ನನಗೆ ನಾನು ಎಂಬ ಅಹಂ ಬಂದಿಲ್ಲ. ಯಾರದ್ದೋ ಪ್ರೇರಣೆ ಮೂಲಕ ಈ ಕೃತಿಗಳು ಬಂದಿವೆ ಎಂದರು.
ಅಶೋಕ ಸೋನಕರ, ಚಂದ್ರಕಾಂತ ಬೆಲ್ಲದ, ಡಾ. ಅನಿತಾ ರೈ, ವಿಷ್ಣು ಹುಕ್ಕೇರಿ, ಡಾ. ಶಶಿಧರ ನರೇಂದ್ರ, ಹರ್ಷ ಡಂಬಳ, ರಾಷ್ಟ್ರೊತ್ಥಾನ, ವೀರ ಸಾವರಕರ್​ ಬಳಗ, ಸಂಸ್ಕಾರ ಭಾರತೀ ಸದಸ್ಯರು, ಇತರರು ಇದ್ದರು.
ರಾವೇಂದ್ರ ಅಂಬೇಕರ ಸ್ವಾಗತಿಸಿದರು. ವಿಘ್ನೇಶ್ವರ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net