ಲೋಕಕಲ್ಯಾಣಕ್ಕಾಗಿ ಹನುಮಾನ್ ಚಾಲೀಸಾ ಪಾರಾಯಣ

27 GVT 01
ಗಂಗಾವತಿ ತಾಲೂಕಿನ ಸಂಗಾಪುರ ಕಣಿವೆ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಾನ್ ಚಾಲೀಸಾ ಪಾರಾಯಣದ ಮಹಾಮಂಗಲೋತ್ಸವ ನಿಮಿತ್ತ ಹೋಮ ಜರುಗಿತು. ದೇವಾಲಯದ ಮುಖ್ಯಸ್ಥ ಗೋಪಾಲಸ್ವಾಮಿ, ವಾಲಿ ಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯಸ್ವಾಮೀಜಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಸಂಗಾಪುರ ಕಣಿವೆ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಾನ್ ಚಾಲೀಸಾ ಪಾರಾಯಣದ ಮಹಾಮಂಗಲೋತ್ಸವ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಲೋಕಕಲ್ಯಾಣಕ್ಕಾಗಿ ದೇವಾಲಯದಲ್ಲಿ ವಿವಿಧ ಭಜನಾ ಮಂಡಳಿ ಮತ್ತು ಭಕ್ತರ ಸಹಯೋಗದೊಂದಿಗೆ ಹನುಮಾನ ಚಾಲೀಸಾ ಪಾರಾಯಣ ಹಮ್ಮಿಕೊಂಡಿದ್ದು, ಸಮಾರೋಪ ಹಿನ್ನೆಲೆಯಲ್ಲಿ ಪಾರಾಯಣದ ಮಹಾ ಮಂಗಲೋತ್ಸವ ನೆರವೇರಿಸಲಾಯಿತು.

ದೇವಾಲಯದ ಮೂರ್ತಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಹನುಮಾನ ಚಾಲೀಸಾ ಪಾರಾಯಣ, ಸಮರ್ಪಣೆ ಹೋಮ, ಪೂರ್ಣಾಹುತಿ ಮತ್ತು ಪ್ರಸಾದ ವಿತರಣೆ ಜರುಗಿತು.

ದೇವಾಲಯದ ಮುಖ್ಯಸ್ಥ ಗೋಪಾಲಸ್ವಾಮಿ ಮಾತನಾಡಿ, ಲೋಕಕಲ್ಯಾಣಕ್ಕಾಗಿ ಹನುಮಾನ್ ಚಾಲೀಸಾ ಪಾರಾಯಣ ಹಮ್ಮಿಕೊಂಡಿದ್ದು, ರಾಮಾಯಣದಲ್ಲಿ ಬರುವ ಸುಂದರಕಾಂಡ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.

ವಾಲಿ ಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ, ಮುಖಂಡರಾದ ಶ್ರೀನಿವಾಸ, ಶಿವಪ್ಪ, ನಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net