ಶೋಷಿತರ ಕಲ್ಯಾಣಕ್ಕೆ ಅರಸು ಶ್ರಮ

1
ರಾಯಬಾಗ ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಅವರ 109ನೇ ಜಯಂತಿ ಆಚರಿಸಲಾಯಿತು. ಡಾ.ನೀಲಕಂಠ ಪೂಜಾರ, ತಹಸೀಲ್ದಾರ್ ಎಸ್.ಆರ್.ಮುಂಜೆ, ಅರುಣ ಮಾಚಕನೂರ, ಭಾರತಿ ಕಾಂಬಳೆ ಇತರರಿದ್ದರು.
Published on

ರಾಯಬಾಗ: ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೊಳಿಸುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಹೆಗ್ಗಳಿಕೆ ಮಾಜಿ ಸಿಎಂ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಧಾರವಾಡದ ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ.ನೀಲಕಂಠ ಪೂಜಾರ ಹೇಳಿದರು.

ಪಟ್ಟಣದ ಡಾ.ಬಾಬು ಜಗಜೀವನರಾಂ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 109ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಅರಸು ಅವರು ಶ್ರಮಿಕರ, ಶೋಷಿತರ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗ ವಸತಿ ನಿಲಯದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ತಹಸೀಲ್ದಾರ್ ಎಸ್.ಆರ್.ಮುಂಜೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಅರುಣ ಮಾಚಕನೂರ, ಸಿಡಿಪಿಒ ಭಾರತಿ ಕಾಂಬಳೆ, ಎಸ್.ಬಿ.ಮಲಾಜ್, ಡಾ.ಸಿ.ಎಸ್.ಹಿರೇಮಠ, ಎಸ್.ಎಸ್.ಪಾಟೀಲ, ಎ.ಬಿ.ಕದಂ, ಸಿದ್ದು ಪೂಜಾರಿ, ಸದಾನಂದ ಹಳಿಂಗಳಿ, ಅಪ್ಪಾಜಿ ಪೂಜಾರಿ, ಏಕನಾಥ ಮಾಚಕನೂರ, ರವಿ ತಳವಾರ, ಅನಿಲ ಬೊಮ್ಮನವರ, ಗೋಪಾಲ ಕೋಚೆರಿ, ಕಲ್ಪನಾ ಕಾಂಬಳೆ, ಶಿಕ್ಷಕ ಬಿ.ಎಲ್.ಘಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net