

ಅಥಣಿ ಗ್ರಾಮೀಣ: ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಭಾನುವಾರ ಅಧಿಕಾರಿಗಳೊಂದಿಗೆ ತೆರಳಿ ತಾಲೂಕಿನ ಸಪ್ತಸಾಗರ, ದರೂರ, ಹಲ್ಯಾಳ, ಖವಟಕೊಪ್ಪ, ಶೇಗುಣಸಿ, ಹುಲಗಬಾಳ ಸೇರಿ ಹಲವು ಗ್ರಾಮಗಳ ಕೃಷ್ಣಾ ನದಿ ತೀರದ ಸ್ಥಿತಿ-ಗತಿ ಪರಿಶೀಲಿಸಿದರು.
ಹುಲಗಬಾಳ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ದಿನಬಳಕೆ, ದಿನಸಿ ಕಿಟ್‌ಗಳು ಹಾಗೂ ಜಾನುವಾರುಗಳಿಗೆ ಮೇವು ವಿತರಿಸಿದರು. ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಹಿಪ್ಪರಗಿ ಅಣೆಕಟ್ಟೆ ಮೇಲ್ಭಾಗದ ಕೃಷ್ಣಾನದಿ ಪ್ರವಾಹ ಪೀಡಿತ ಕೆಲ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸ್ಥಳಾಂತರಕ್ಕೆ ಭೂಮಿ ಸಿಗುತ್ತಿಲ್ಲ. ಪ್ರವಾಹದಿಂದ ಸಂಕಷ್ಟಕ್ಕೊಳಗಾದವರಿಗೆ ಸರ್ಕಾರದಿಂದ ಪರಿಹಾರ ನೀಡುವ ಭರವಸೆ ನೀಡಿದರು.
ಕಾಳಜಿ ಕೇಂದ್ರಗಳಲ್ಲಿ ಸರಿಯಾಗಿ ಊಟೋಪಚಾರ, ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಜಾನುವಾರುಗಳಿಗೆ ಹಸಿ ಹಾಗೂ ಒಣ ಮೇವು ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ವಾಣಿ ಯು., ತಾಪಂ ಇಒ ಶಿವಾನಂದ ಕಲ್ಲಾಪುರ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಶಿವಾನಂದ ಕಾರಜೊಳ, ಗ್ರೇಟ್-2 ತಹಸೀೀಲ್ದಾರ್ ಶ್ರೀಶೈಲ ಗೂಡಣೆ, ತಾಲೂಕು ಪಶುವೈದ್ಯಾಧಿಕಾರಿ ಡಿ.ಜೆ. ಕಾಂಬಳೆ, ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ, ನೋಡಲ್ ಅಧಿಕಾರಿ ಉಮೇಶ ಪ್ರದಾನಿ, ಗ್ರಾಮಾಡಳಿತಾಧಿಕಾರಿ ರಾಘವೇಂದ್ರ ಪಳಕೆ, ಡಿ.ಜೆ.ಕಾಂಬಳೆ, ಶಾಂತಿನಾಥ ನಂದೇಶ್ವರ ಇತರರಿದ್ದರು.