ಮಳೆಗಾಗಿ ಬಾಪೂರಕ್ಕೆ ಪಾದಯಾತ್ರೆ

Kavital Padayatre
ಅನ್ವರಿ ಗ್ರಾಮಸ್ಥರು ಸೋಮವಾರ ಅಮೀನಗಡ ಗಂಗಾದೇವಿ ಮಠದಲ್ಲಿ ದರ್ಶನ ಪಡೆದು ಬಾಪೂರಕ್ಕೆ ತೆರಳಿದರು. ಪ್ರಮುಖರಾದ ಅಯ್ಯಪ್ಪ, ಬಸವಲಿಂಗಪ್ಪ, ಹನುಮಂತ, ಮಲ್ಲಪ್ಪ, ಮಾಳಪ್ಪ, ಹೊಳೆಪ್ಪ, ಹುಚ್ಚಪ್ಪ, ಭೀಮಣ್ಣ ಇತರರಿದ್ದರು.
Published on

ಕವಿತಾಳ: ಮಳೆಗಾಗಿ ಅನ್ವರಿ ಗ್ರಾಮಸ್ಥರು ಆಂಧ್ರಪ್ರದೇಶದ ಬಾಪೂರು ಗಂಗಾದೇವಿ ಮಠಕ್ಕೆ ಸೋಮವಾರ ಪಾದಯಾತ್ರೆ ಮೂಲಕ ತೆರಳಿದರು.

ಪಾದಯಾತ್ರೆ ಪ್ರಮುಖ ಅಯ್ಯಪ್ಪ ಮಾತನಾಡಿ, ಸಮೃದ್ಧ ಮಳೆ, ಬೆಳೆಗಾಗಿ ನಾವು ಆಂಧ್ರದ ಕರ್ನೂಲ್ ಜಿಲ್ಲೆ ಬಾಪೂರ ಗಂಗಾದೇವಿ ಮಠಕ್ಕೆ ಪಾದಯಾತ್ರೆ ಮುಖಾಂತರ ತೆರಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇವೆ. ಗಂಗಾದೇವಿಯ ಪವಿತ್ರ ಜಲವನ್ನು ತನುಬಿಂದಿಗೆಯನ್ನು ಒದ್ದೆಬಟ್ಟೆ ಮುಖಾಂತರ ಅನ್ವರಿ ಗ್ರಾಮಕ್ಕೆ ತಂದು ದೈವದ ಸಮ್ಮುಖದಲ್ಲಿ ಪೂಜೆ ನೆರವೇರಿಸುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಪ್ರತಿ ವರ್ಷ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಅಮೀನಗಡದ ಗಂಗಾದೇವಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರು ಸತ್ಕರಿಸಿ ಬೀಳ್ಕೊಟ್ಟರು. ಪ್ರಮುಖರಾದ ಬಸವಲಿಂಗಪ್ಪ, ಹನುಮಂತ, ಮಲ್ಲಪ್ಪ, ಮಾಳಪ್ಪ, ಹೊಳೆಪ್ಪ, ಹುಚ್ಚಪ್ಪ, ಭೀಮಣ್ಣ, ಬಸವರಾಜ, ಗಂಗಪ್ಪ, ಹುಚ್ಚಪ್ಪ ತಾತ, ಮೌಲಸಾಬ್, ಹನುಮಂತ, ಕುಶಪ್ಪ ಯಲ್ಲಪ್ಪ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net