ಅಭಿವೃದ್ಧಿ ದೃಷ್ಟಿಯಿಂದ ಕರಾವಳಿ ಪ್ರತ್ಯೇಕ ಜಿಲ್ಲೆಯಾಗಿಸಲು ಒತ್ತಾಯ

26ANKOLA3
Published on


ಅಂಕೋಲಾ: ಉತ್ತರ ಕನ್ನಡದ ಕಾರವಾರ ತಾಲೂಕು ಸೇರಿ ಕರಾವಳಿ ಭಾಗ ಪ್ರತ್ಯೇಕ ಜಿಲ್ಲೆ ಆಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಮಜಲುಗಳಲ್ಲಿ ಹೋರಾಟ ಮಾಡಲಾಗುತ್ತದೆ. ಈ ಹೋರಾಟಕ್ಕೆ ಜನಪತ್ರಿನಿಧಿಗಳ ಸಹಕಾರ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುನೀಲ ಎಸ್. ನಾಯ್ಕ ಹೊನ್ನೆಕೇರಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಯಾದಲ್ಲಿ ಅದು ಘಟ್ಟದ ಮೇಲೆ ಹೋಗುತ್ತದೆ. ಆ ಭಾಗದಲ್ಲಿ ಮಂತ್ರಿಗಳು ಸೇರಿ ಪ್ರಭಾವಿ ರಾಜಕಾರಣಿಗಳಿದ್ದಾರೆ. ಮುಂದಿನ ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ಕರಾವಳಿ ಭಾಗವು ಪ್ರತ್ಯೇಕ ಜಿಲ್ಲೆಗೆ ಸೂಕ್ತವಾಗಿದೆ ಎಂದರು. ಮಾದೇವ ಬೇಲಿಫ್ ಕೇಣಿ, ಪ್ರಸನ್ನ ಕೆ. ನಾಯ್ಕ, ರತ್ನಾಕರ ಗೌಡ, ಪ್ರಶಾಂತ ನಾಯ್ಕ, ಸಂದೀಪ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net