ಬಡವರಿಗೆ ಬೆಳಕಾದ ಜೊಲ್ಲೆ ಸೊಸೈಟಿ

8blh4 jolle socoety news-Web
ಬೈಲಹೊಂಗಲದಲ್ಲಿ ಬೀರೇಶ್ವರ ಶಾಖೆಯ ಪೂಜಾ ಕಾರ್ಯಕ್ರಮ ಜರುಗಿತು. ಪ್ರಭುನೀಲಕಂಠ ಸ್ವಾಮೀಜಿ, ವೇಮೂ.ಮಹಾಂತಯ್ಯ ಆರಾದ್ರಿಮಠ, ಡಾ. ವಿಶ್ವನಾಥ ಪಾಟೀಲ, ಈರಣ್ಣ ಕರೀಕಟ್ಟಿ, ಶಂಕರ ಮಾಡಲಗಿ, ಬಿ.ಎನ್.ಮಾಳಿ, ಆರ್.ಎಸ್.ರೊಟ್ಟಯ್ಯನವರ, ಮಹೇಶ ಕಾರಿಮನಿ, ವಿ.ಎಸ್.ಬಳಿಗಾರ, ಪ್ರಸಾದ ಕಾರಿಮನಿ, ಬಾಳಪ್ಪ ಚವರದ, ಬಿ.ಎಂ.ಚಿಕ್ಕನಗೌಡರ ಇದ್ದರು.
Published on

ಬೈಲಹೊಂಗಲ: ಜೊಲ್ಲೆ ಉದ್ಯೋಗ ಸಮೂಹ ಸಹಸ್ರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದೆ ಎಂದು ಪಟ್ಟಣದ ಶಾಖಾ ಮೂರು ಸಾವಿರ ಮಠದ ಪ್ರಭುನೀಲಕಂಠೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಗುರುವಾರ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜನ್ಮದಿನ, ಬೀರೇಶ್ವರ ಕೋ-ಆಪ್ ಕ್ರೇಡಿಟ್ ಸೊಸೈಟಿ ಶಾಖೆಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಹಕಾರಿಯು ರಾಜ್ಯ, ಹೊರ ರಾಜ್ಯಗಳಲ್ಲೂ ಒಟ್ಟಾರೆ 153 ಶಾಖೆ ಹೊಂದಿದ್ದು, ಪಟ್ಟಣದ ಶಾಖೆ ಸುಮಾರು 19 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ, 17 ಕೋಟಿ ರೂ. ಠೇವು ಸಂಗ್ರಹಿಸಿ, 18 ಕೋಟಿ ರೂ. ಸಾಲ ವಿತರಿಸಿ ನಾಡಿನ ಅಭಿವೃದ್ಧಿಗೆ ಕೈ ಜೋಡಿಸಿದೆ ಎಂದರು.

ಶಾಸಕ ವಿಶ್ವನಾಥ ಪಾಟೀಲ, ಜೊಲ್ಲೆ ಕುಟುಂಬದ ಸಮಾಜ ಸೇವೆ ಸ್ಮರಿಸಿದರು. ಶಾಖಾ ವ್ಯವಸ್ಥಾಪಕ ಶ್ರೀಶೈಲ ಪುಠಾಣೆ, ವೇದಮೂರ್ತಿ ಮಹಾಂತಯ್ಯ ಶಾಸಿ ಆರಾದ್ರಿಮಠ, ಸಲಹಾ ಸಮಿತಿ ಅಧ್ಯಕ್ಷ ಶ್ರೀಶೈಲ ಯಡಳ್ಳಿ, ಉಪಾಧ್ಯಕ್ಷ ಈರಣ್ಣ ಬೇಟಗೇರಿ, ಸಮಿತಿ ಸದಸ್ಯರಾದ ವಿಜಯ ಸೊಪ್ಪಿಮಠ, ಶ್ರೀಕಾಂತ ಶಿರಹಟ್ಟಿ, ರಾಜು ಸೋಗಲ, ನಾಗೇಶ ಯಕ್ಕುಂಡಿ, ಶಾಂತಾ ಮಡ್ಡಿಕರ, ಹನುಮಂತಪ್ಪ ಸುಂಕದ, ಶಿವಾನಂದ ಅಮ್ಮಿನಬಾವಿ, ಜಗದೀಶ ಜಕ್ಕಪ್ಪನವರ, ಮಹೇಶ ಮಗದುಮ್ಮ ಇತರರು ಇದ್ದರು.

ದೊಡವಾಡದಲ್ಲಿ ಶಾಖೆ ಉದ್ಘಾಟನೆ: ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಹುಟ್ಟುಹಬ್ಬದ ಅಂಗವಾಗಿ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ 47ನೇ ಶಾಖೆಯನ್ನು ಗುರುವಾರ ಉದ್ಘಾಟಿಸಲಾಯಿತು. ದೊಡವಾಡ ಹಿರೇಮಠದ ಜಡಿಸಿದ್ಧೇಶ್ವರ ಶ್ರೀಗಳು ಮಾತನಾಡಿ, ಸಹಕಾರಿಯ ಶಿಕ್ಷಣ, ಕೃಷಿ, ವಾಣಿಜ್ಯ ಸೇರಿ ಎಲ್ಲ ಕ್ಷೇತ್ರಗಳನ್ನು ತೊಡಗಿಸಿಕೊಂಡು ಸಮಾಜದ ಎಲ್ಲ ವರ್ಗದ ಜನರ ಸೇವೆ ಮಾಡುತ್ತಿರುವುದು ಉತ್ತಮ ಸಂಗತಿ ಎಂದರು.

ಜಿಪಂ ಸದಸ್ಯರಾದ ಈರಣ್ಣ ಕರೀಕಟ್ಟಿ, ಶಂಕರ ಮಾಡಲಗಿ, ಜ್ಯೋತಿ ಸಹಕಾರಿ ಉಪಾಧ್ಯಕ್ಷ ಬಿ.ಎನ್.ಮಾಳಿ, ನಿರ್ದೇಶಕ ಶರಪುದ್ದಿನ್ ಮುಲ್ಲಾ, ಆರ್.ಎಸ್.ರೊಟ್ಟಯ್ಯನವರ, ಮಹೇಶ ಕಾರಿಮನಿ, ವಿ.ಎಸ್.ಬಳಿಗಾರ, ಪ್ರಸಾದ ಕಾರಿಮನಿ, ಬಾಳಪ್ಪ ಚವರದ, ಬಿ.ಎಂ.ಚಿಕ್ಕನಗೌಡರ, ಮಡ್ಡೆಪ್ಪ ಗುಗ್ಗರಿ, ಮಹಾಂತೇಶ ಕಮತ, ಅರುಣಕುಮಾರ ಪರಾಳೆ, ಉಪನ್ಯಾಸಕ ಸಂಗಮೇಶ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net