ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ

25 GKK-3-Web
ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದದಲ್ಲಿ ದಿ.ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಮಾನಂದ ಪೂಜೇರಿ, ಮಹಾಂತೇಶ ತಾವಂಶಿ, ಆತ್ಮಾನಂದ ಸ್ವಾಮೀಜಿ ಇದ್ದರು.
Published on

ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಮತ್ತು ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ವಿವಿಧ ಸಂಘಟನೆಗಳ ಜತೆ ಸ್ಥಳೀಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಇಲ್ಲಿನ ಶಿವಸ್ಮಾರಕ ಸಭಾಗೃಹದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ತೋಪಿನಕಟ್ಟಿ ಶ್ರೀಮಹಾಲಕ್ಷ್ಮೀ ಗ್ರೂಫ್ ಸಂಸ್ಥಾಪಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ ಹಾಗೂ ಇತರರು ಅಗಲಿದ ಗಣ್ಯರಿಗೆ ನುಡಿನಮನ ಅರ್ಪಿಸಿದರು.

ಸುರೇಶ ಮ್ಯಾಗೇರಿ, ವಿಠ್ಠಲ ಪಾಟೀಲ, ಮಹಾಬಲೇಶ್ವರ ಚವಲಗಿ, ಮಾರುತಿ ಟಕ್ಕೇಕರ, ಸಂತೋಷ ಹಡಪದ, ದರ್ಶನ ಕಿಲಾರಿ, ಗುಂಡು ತೋಪಿನಕಟ್ಟಿ, ಶಿವಾನಂದ ಚಲವಾದಿ, ಅಪ್ಪಯ್ಯ ಕೋಡೊಳಿ, ರಾಜೇಂದ್ರ ರಾಯ್ಕ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ನಂದಗಡ ಗ್ರಾಮದ ಎನ್.ಆರ್.ಇ ಸಂಸ್ಥೆಯ ಮಹಾತ್ಮ ಗಾಂಧಿ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಚಿವ ಸುರೇಶ ಅಂಗಡಿ ಮತ್ತು ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಸಿ.ಜಿ ವಾಲಿ, ಮಹಾಂತೇಶ ವಾಲಿ, ಮಹಾಂತೇಶ ರಾಹುತ, ಜೆ.ಎಸ್ ಜೋಡಂಗಿ, ಎಂ.ಕೆ ಭಜಂತ್ರಿ, ವೈ.ಯು ಪಾಟೀಲ, ಪಿ.ಎಸ್.ಕೋಲಕಾರ, ಎನ್.ಎಂ.ದಲಾಲ, ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಲೂಕಿನ ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಾಲೆಯ ಆಡಳಿತ ಮಡಳಿ ಅಧ್ಯಕ್ಷ ಸುಭಾಸ ಗುಳಶೆಟ್ಟಿ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿ ಅಗಲಿದ ಗಣ್ಯರ ಆತ್ಮಕ್ಕೆ ಶಾಂತಿಕೋರಿ, ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಉಪಾಧ್ಯಕ್ಷ ಬಾಬು ನಾಶಿಪುಡಿ, ಕಾರ್ಯದರ್ಶಿ ವೀರೇಶ ದೇವರಮನಿ, ಸಂಘದ ನಿರ್ದೇಶಕ ಬಾಬು ಕಂಚಿ, ಪಾರಿಶ್ವಾಡ, ಕಾಮಶಿನಕೊಪ್ಪ, ಗಾಡಿಕೊಪ್ಪ, ದೇವಲತ್ತಿ ಹಾಗೂ ಹಿರೇಹಟ್ಟಿಹೊಳಿ ಗ್ರಾಮಗಳ ರೈತ ಮುಖಂಡರು ಪಾಲ್ಗೊಂಡು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ಸಾಧನೆಗಳನ್ನು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net