ವಸತಿ ರಹಿತರಿಗೆ ಶೀಘ್ರವೇ ಹಕ್ಕುಪತ್ರ ವಿತರಣೆ

hbhalli mla meet
ಹಂಪಸಾಗರದ ವಾಲ್ಮೀಕಿ ಭವನದಲ್ಲಿ ಹೋಬಳಿ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಮಾತನಾಡಿದರು. ತಹಸೀಲ್ದಾರ್ ಆರ್.ಕವಿತಾ, ತಾಪಂ ಇಒ ಡಾ.ಪರಮೇಶ್ವರಪ್ಪ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಹಂಪಸಾಗರ ಹಗರಿಬೊಮ್ಮನಳ್ಳಿ ತಾಲೂಕಲ್ಲಿದ್ದರೂ ಅದು ನನ್ನ ಮತ ಕ್ಷೇತ್ರ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಅಧಿಕಾರಿಗಳಿಗೆ ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಸೂಚಿಸಿದರು.

ತಾಲೂಕಿನ ಹಂಪಸಾಗರ ಗ್ರಾಮದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಸಹ ತಾರತಮ್ಯ ಮಾಡದೆ ಕ್ಷೇತ್ರದ ಪ್ರಗತಿಗಾಗಿ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ. ಅಲ್ಲದೆ, ನಿವೇಶನ ಹಂಚಿಕೆ ಕುರಿತಂತೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್, ತಾಪಂ ಇಒ ಜತೆ ಚರ್ಚಿಸಿ ಹಕ್ಕುಪತ್ರ ನೀಡಲಾಗುವುದು.

ಅಲ್ಲದೆ, ಸರ್ಕಾರಿ ನಿವೇಶನಗಳಲ್ಲಿ ಮನೆ, ಗುಡಿಸಲು ನಿರ್ಮಿಸಿಕೊಂಡಿರುವ ಬಡವರನ್ನು ಒಕ್ಕಲೆಬ್ಬಿಸಬಾರದು ಎಂದ ಅವರು, ಹಂಪಸಾಗರ ಹೋಬಳಿಯ ಐದು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರಿಗೆ ವಸತಿ ಕಲ್ಪಿಸಿ ಶೀಘ್ರವೇ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್ ಆರ್.ಕವಿತಾ, ತಾಪಂ ಇಒ ಜಿ.ಪರಮೇಶ್ವರ್, ಕುಡಿವ ಸರಬರಾಜು ಇಲಾಖೆ ಎಇಇ ಬಸವರೆಡ್ಡಿ, ಸಿಡಿಪಿಒ ಬೋರೇಗೌಡ, ಒಬಿಸಿ ಅಧಿಕಾರಿ ವಿ.ರಮೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆನಂದ್ ಡೊಳ್ಳಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net