ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

07 SND 01
ಸಿಂಧನೂರು ಉಪತಹಸೀಲ್ದಾರ್ ಚಂದ್ರಶೇಖರ ಅವರಿಗೆ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಅಂಬಣ್ಣ ಮಲ್ಲಾಪುರ, ತಾಲೂಕು ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ ಮಲ್ಲಾಪುರ, ಉಪಾಧ್ಯಕ್ಷ ಮಾರೆಪ್ಪ ರಾಮತ್ನಾಳ, ಕುಬೇರಪ್ಪ ಕೆ ಹೊಸಳ್ಳಿ, ಸಹಕಾರ್ಯದರ್ಶಿ ನಾಗಲಿಂಗ ಜವಳಗೇರ ಇತರರಿದ್ದರು.
Published on

ಸಿಂಧನೂರು: ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿಗೆ ಕಾರಣರಾದ ಶಾಸಕ, ಪುತ್ರನ ವಿರುದ್ಧ ಕ್ರಮಕೈಗೊಳ್ಳಬೇಕು. ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಸಮಿತಿ, ತಹಸಿಲ್ ಕಚೇರಿಯಲ್ಲಿ ಬುಧವಾರ ಉಪತಹಸೀಲ್ದಾರ್ ಚಂದ್ರಶೇಖರರಿಗೆ ಮನವಿ ಸಲ್ಲಿಸಿತು.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರ ಪಂಪನಗೌಡ ಪಿಎಸ್‌ಐ ಪರುಶುರಾಮ ಅವರ ವರ್ಗಾವಣೆ ವಿಷಯಕ್ಕೆ ಹಣದ ಬೇಡಿಕೆಯನ್ನಿಟ್ಟು ಒತ್ತಡ ಹಾಕಲಾಗಿತ್ತು. ಈ ಕುರಿತು ಮನಸ್ಸಿನ ಒತ್ತಡದಿಂದಾಗಿ ಮೃತಪಟ್ಟಿದ್ದಾರೆ.

ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಪೊಲೀಸ್ ರಕ್ಷಣೆ ನೀಡಬೇಕು. ಶಾಸಕ ಚನ್ನಾರೆಡ್ಡಿ ಹಾಗೂ ಅವರ ಮಗನನ್ನು ಕೂಡಲೇ ಬಂಧಿಸಲು ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net