

ಚಿಕ್ಕೋಡಿ: ಜಮ್ಮು ಕಾಶ್ಮೀರದ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ, ಉಗ್ರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಮ್ಮು ಕಾಶ್ಮೀರದಲ್ಲಿ ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿ 10 ಯಾತ್ರಾರ್ಥಿಗಳನ್ನು ಕೊಂದಿದ್ದಾರೆ. ಜಮ್ಮು ಕಾಶ್ಮೀರವು ಪಾಕಿಸ್ತಾನ ಪೋಷಿತ ಭಯೋತ್ಪಾದನೆಯಿಂದ ಇನ್ನೂ ಮುಕ್ತವಾಗಿಲ್ಲ. 370 ವಿಧಿಯನ್ನು ರದ್ದುಪಡಿಸಿದ ನಂತರ ಒಂದು ಆಶಾದೀಪ ಬೆಳಗಿತ್ತು. ಆದರೆ, ಉಗ್ರರ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲ. ಹಿಂದುಗಳನ್ನು ಗುರುತಿಸಿ ಅವರ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದೆ.
ಇಂತಹ ಹೇಯ ಕೃತ್ಯ ಮಾಡಿದ ಭಯೋತ್ಪಾದಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ವಿನಾಯಕ ಮಾಳಿ, ಅನಿಲ ಮೋರೆ, ನಾಗೇಂದ್ರ ಪರಗೌಡ, ಕಿರಣ ಗುಡಸೆ, ಶಂಕರ ಹಂಜ್ಯಾನಟ್ಟಿ, ಅಶೋಕ ಖಾಡ, ಸುನೀಲ ಮುತ್ನಾಳೆ, ಕೃಷ್ಣಾ ದೇವನಗೋಳ, ಕಿಶನ ಮಾಳಿ, ಅನುಪ ಸಮ್ಮತಶೆಟ್ಟಿ, ಅರವಿಂದ ಸುಣಗಾರ, ಮಾರುತಿ ಮಾಳಿ,ಕಿರಣ ಗುಡಸೆ ಇತರರು ಇದ್ದರು.
ಚಿಕ್ಕೋಡಿಯಲ್ಲಿ ಜಮ್ಮು ಕಾಶ್ಮೀರದ ಭಯೋತ್ಪಾದನೆ ಕೃತ್ಯ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ವಿನಾಯಕ ಮಾಳಿ, ಅನಿಲ ಮೋರೆ,ನಾಗೇಂದ್ರ ಪರಗೌಡ ಇತರರು ಇದ್ದರು.