ಕ್ಷೇತ್ರದ ಗ್ರಾಮಗಳಿಗೆ ಮೂಲ ಸೌಕರ್ಯ

22KADABI2
Published on

ಕಡಬಿ: ಸವದತ್ತಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಹಂತ ಹಂತವಾಗಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಹಾಗೂ 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಿಗದಿತ ಅವಯೊಳಗೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಫಕೀರಪ್ಪ ಸುಣಧೋಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಕುಂಟಿರಪ್ಪಗೋಳ, ಗಂಗಪ್ಪ ಮೀಶಿ, ನಕುಲ ಮಾಳೈನ್ನವರ, ಬಾಳಪ್ಪ ಬಾಗೇವಾಡಿ, ಸಿದ್ದಪ್ಪ ಮುಕ್ಕನ್ನವರ, ಮುಖಂಡರಾದ ಚಾಯಪ್ಪ ಹುಂಡೇಕಾರ, ಸೈದುಸಾಬ ಸನದಿ, ಮಹಾದೇವ ಮಾಳೈನ್ನವರ, ಶ್ರೀಧರ ಕಾಂಬಳೆ, ತಿಪ್ಪಣ್ಣ ಉದಗಟ್ಟಿ, ಮಹಾವೀರ ಹುಕ್ಕೇರಿ, ಸಿದ್ದಪ್ಪ ಮಾಳಕ್ಕನ್ನವರ, ಶಿವಪ್ಪ ಹಣಮೈನ್ನವರ, ಬಸವರಾಜ ಮಾಳಕ್ಕನ್ನವರ, ಮಡಿವಾಳ ಕುಂಟಿರಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net