ಸಹಕಾರ ಕ್ಷೇತ್ರಕ್ಕೆ ಪರ್ವತರೆಡ್ಡಿ ಕೊಡುಗೆ ಅಪಾರ

DVD parvathreddy
ದೇವದುರ್ಗ ತಾಲೂಕು ಮದಕರಲ್‌ನಲ್ಲಿ ಕಸಾಪ ದತ್ತಿನಿಧಿಗೆ ಪರ್ವತರೆಡ್ಡಿ ಫೌಂಡೇಷನ್ ಗೌರವಾಧ್ಯಕ್ಷೆ ಶಶಿಕಲಾ ಪಿ.ಪಾಟೀಲ್ ಧನಸಹಾಯದ ಚೆಕ್ ವಿತರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮುನಿಯಪ್ಪ ನಾಗೋಲಿ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು, ದತ್ತಿದಾನಿ ಶರಣಗೌಡ ಮದರಕಲ್ ಇದ್ದರು.
Published on

ದೇವದುರ್ಗ: ಪರ್ವತರೆಡ್ಡಿ ಮಾಲಿಪಾಟೀಲ್ ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಸಹಕಾರಿ ಧುರೀಣ ಎಂದೇ ಖ್ಯಾತಿ ಪಡೆದಿದ್ದರು ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನರಸಿಂಗರಾವ್ ಸರ್ಕೀಲ್ ಹೇಳಿದರು.

ತಾಲೂಕಿನ ಮದರಕಲ್ ಗ್ರಾಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕಸಾಪ ಹಾಗೂ ಶ್ರೀ ಪರ್ವತರೆಡ್ಡಿ ಮಾಲಿಪಾಟೀಲ್ ಫೌಂಡೇಷನ್ ಆಯೋಜಿಸಿದ್ದ ಪರ್ವತರೆಡ್ಡಿ ಮಾಪಾ 5ನೇ ಪುಣ್ಯಸ್ಮರಣೆ ಹಾಗೂ ದತ್ತಿನಿಧಿ ಠೇವಣಿ ಸ್ವೀಕಾರ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಮದರಕಲ್ ಮಾಲಿಪಾಟೀಲ್ ಕುಟುಂಬ ದತ್ತಿನಿಧಿ ಸತ್ಕಾರ್ಯಕ್ಕೆ ಸಂಕಲ್ಪ ಮಾಡಿರುವುದು ಸ್ವಾಗತಾರ್ಹ. ಸಹಕಾರ ಕ್ಷೇತ್ರದಲ್ಲಿ ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲೂ ಚಟುವಟಿಕೆ ಆರಂಭಿಸಿದ್ದಾರೆ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿದರು. ದತ್ತಿದಾನಿ ಶರಣಗೌಡ ಮದರಕಲ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮುನಿಯಪ್ಪ ನಾಗೋಲಿ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು, ಬಸವರಾಜ ಬ್ಯಾಗವಾಟ, ಫೌಂಡೇಷನ್ ಗೌರವಾಧ್ಯಕ್ಷೆ ಶಶಿಕಲಾ ಪಿ.ಪಾಟೀಲ್, ಶಂಕ್ರಯ್ಯಸ್ವಾಮಿ, ಪ್ರದೀಪಗೌಡ ಪಾಟೀಲ್, ಬಸವರಾಜ ಕೊಪ್ಪರ, ಶಿವರಾಜ ರುದ್ರಾಕ್ಷಿ, ಅಭಿಷೇಕ, ರಂಗಪ್ಪ ಕೋತಿಗುಡ್ಡ, ಶ್ರೀನಿವಾಸ ದಾಸರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net