

ಲಕ್ಷ್ಮೇಶ್ವರ: ಪಟ್ಟಣದಲ್ಲಿ ನೂತನವಾಗಿ ಜೆಸಿಐ ಲಕ್ಷ್ಮೇಶ್ವರ ಪುಲಿಗೆರೆಪ್ರಭೆ ಅಸ್ತಿತ್ವಕ್ಕೆ ಬಂದಿದ್ದು, ಮಂಗಳವಾರ ಅಧ್ಯಕ್ಷೆಯಾಗಿ ಲಕ್ಷ್ಮೀ ಹಂಗನಕಟ್ಟಿ, ಕಾರ್ಯದರ್ಶಿ ಪ್ರಶಾಂತಗೌಡ ನರಸಮ್ಮನವರ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಜೆಸಿಐ ಸಂಸ್ಥೆ ಯುವಕರನ್ನು ಬೆಳೆಸುವ ಉದ್ದೇಶ ಹೊಂದಿದೆ. ಹಲವಾರು ವರ್ಷಗಳಿಂದ ಉತ್ತಮ ಕಾರ್ಯ ಮಾಡುತ್ತಿದೆ. ಆದರೆ ಮೊಬೈಲ್ ಗೀಳು, ದುಶ್ಚಟಗಳಿಗೆ ದಾಸರಾಗುವ ಮೂಲಕ ತಮ್ಮಲ್ಲಿರುವ ಸಾಮರ್ಥ್ಯವನ್ನು ಕಳೆದುಕೊಳ್ಳೂತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜೆಸಿಐ ವಲಯಾಧ್ಯಕ್ಷ ಜೆಸಿಐ ಗೌರೀಶ ಭಾರ್ಗವ್, ವಲಯ ಉಪಾಧ್ಯಕ್ಷ ಮದಸೂಧನ್ ನಾವಡ ಮಾತನಾಡಿದರು. ಚಂಬಣ್ಣ ಬಾಳಿಕಾಯಿ, ಪತ್ರಕರ್ತ ಡಿ.ಎಂ. ಪೂಜಾರ, ಈರಪ್ಪ ಮೂಲಿಮನಿ, ಜೆಸಿಐ ನಮ್ಮ ಸವಣೂರ ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ, ರಾಘವೇಂದ್ರ ಪೂಜಾರ, ಲೇಡಿ ಜೆಸಿಐ ಮಧು ಕಟವಟೆ, ಸೃಜನ ಗೊಜಗೊಜಿ ಇತರರಿದ್ದರು.