ಆರ್ಥಿಕತೆಗೆ ಸಹಕಾರಿ ಕೊಡುಗೆ ಅಪಾರ

web2
ಗೋಕಾಕದಲ್ಲಿ ಹಮ್ಮಿಕೊಂಡಿದ್ದ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಬಸಗೌಡ ಪಾಟೀಲ, ವರ್ಧಮಾನ ಬೋಳಿ, ಬಸಪ್ಪ ಸಂತಿ, ಶಿವಪ್ಪ ಮರ್ದಿ ಇತರರಿದ್ದರು.
Published on

ಗೋಕಾಕ: ಮಹತ್ತರ ಯೋಜನೆಗಳ ಮೂಲಕ ಗ್ರಾಹಕರ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಬೈಲಹೊಂಗಲ ಉಪ ವಿಭಾಗದ ಗೋಕಾಕ, ಮೂಡಲಗಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶದ ಪ್ರಗತಿಯಾಗಲು ಸಾಧ್ಯವಾಗುತ್ತದೆ. ಗಾಂಧೀಜಿ ಅವರ ರಾಮ ರಾಜ್ಯದ ಕನಸನ್ನು ನನಸಾಗಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ. ರೈತರ ಆರ್ಥಿಕ ಸಬಲತೆಗೆ ಆಕರ್ಷಕ ಯೋಜನೆಗಳನ್ನು ರೂಪಿಸುವ ಜತೆಗೆ ತರಬೇತಿ ಪಡೆದು ಜನರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಸಹಕಾರಿ ಲೆಕ್ಕಪರಿಶೋಧಕ ಅಧಿಕಾರಿ ಜಿ.ಕೆ.ರಾಮಪ್ಪ ಹಾಗೂ ಆದಾಯ ತೆರಿಗೆ ಅಧಿಕಾರಿ ಪಂಪಾಪತಿ ದೇಸಾಯಿ ಅವರು ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ತರಬೇತಿ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕ ವರ್ಧಮಾನ ಬೋಳಿ, ಬಸಪ್ಪ ಸಂತಿ, ಶಿವಪ್ಪ ಮರ್ದಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಲಪ್ಪ ಜಗ್ಗಿನವರ, ಸಮನ್ವಯ ಅಧಿಕಾರಿ ಸಿ.ಎಸ್.ಕರಿಯಪ್ಪ, ರಾಜ್ಯ ಪತ್ತಿನ ಸಹಕಾರ ಮಂಡಳ ನಿರ್ದೇಶಕ ಡಾ.ಸಂಜಯ ಹೊಸಮಠ, ಉಮೇಶ ಬಾಳಿ, ಸಹಕಾರ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ, ನೀರಿಕ್ಷಕ ಎಸ್.ಬಿ. ಬಿರಾದಾರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net