ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು

4ckd4
Published on

ಚಿಕ್ಕೋಡಿ: ಚುನಾಯಿತ ಪ್ರತಿನಿಧಿಗಳು ಗ್ರಾಮ ಮಟ್ಟದಲ್ಲಿ ರಾಜಕೀಯ ದೂರವಿಟ್ಟು, ಒಮ್ಮತದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳಿಂದ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ನಾಗರಮುನ್ನೋಳಿ ಹೋಬಳಿಯನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ ಆಶೀರ್ವಚನ ನೀಡಿದರು. ಚಂದರಗಿ ಕ್ರೀಡಾ ಶಾಲೆ ನಿರ್ದೇಶಕ ಮಹೇಶ ಭಾತೆ, ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಪಿಡಿಒಗಳಾದ ರಾಜಾರಾಮ ರಾಜಾಪೂರೆ, ರವೀಂದ್ರ ದಶವಂತ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಸುನಂದಾ ಗಿರಿಜಾಯಿ, ಮಾಜಿ ಅಧ್ಯಕ್ಷ ಬಸವಣ್ಣಿ ಕುಂಬಾರ, ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ, ಪಿಡಿಒಗಳಾದ ರಮೇಶ ಹೂಗಾರ, ಸಂಜಯ ಚನ್ನವರ, ಅಣ್ಣಪ್ಪ ಇಟನಾಳೆ, ಕಲ್ಮೇಶ ಕಿವಡ, ಡಾ.ಎಂ.ಬಿ.ಕುಂಬಾರ, ಶರತ ಸೊಲ್ಲಾಪುರಕರ, ಸಿದ್ದಪ್ಪ ಮರ‌್ಯಾಯಿ, ವಿ.ಬಿ.ಈಟಿ, ಕುಮಾರ ಈಟಿ, ಲಕ್ಷ್ಮಣ ಮಂಗಿ, ಮಹಾಂತೇಶ ಚವ್ಹಾಣ, ದೇವರಾಜ ಪಾಶ್ಚಾಪುರೆ, ರೋಹಿಣಿ ಕವಣಿ, ಮಲ್ಲಪ್ಪ ಅರಭಾಂವಿ, ಗೌರವ್ವ ಬೀಡ, ಕೋಕಿಲಾ ನಿಂಗಪ್ಪಗೋಳ, ಸುರೇಖಾ ಮುಗಳಿ, ವಿನೋದ ಮಗದುಮ್, ಮಹಾಂತೇಶ ಯಶವಂತ, ಮಹಾದೇವ ಪಾಮದಿನ್ನಿ, ಸಿದ್ದು ಖಿಂಡಿ, ವಿಜಯ ಕೋಠಿವಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net