ಯುವಕರು ಸಮಾಜದ ಅಭಿವೃದ್ಧಿಗೆ ಚಿಂತಿಸಲಿ

16 DVD 2
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಜನರ ಕಾರ್ಯಾಗಾರವನ್ನು ಡಿವೈಎಸ್‌ಐ ಅಧ್ಯಕ್ಷೆ ಲವಿತ್ರಾ ಗುಲ್ಬರ್ಗಾ ಉದ್ಘಾಟಿಸಿದರು. ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಗ್ರಾಪಂ ಸದಸ್ಯರಾದ ಮುಕ್ತಂ ಪಾಷಾ, ಕುಮಾರ್ ಚಪ್ಪಳಿಕಿ, ದುರುಗಪ್ಪ ಹೊರಟ್ಟಿ, ಮೌನೇಶ್ ದಾಸರ, ರಮೇಶ್ ವೀರಾಪುರ, ರಂಗನಾಥ ಬುಂಕಲದೊಡ್ಡಿ ಇತರರಿದ್ದರು.
Published on

ದೇವದುರ್ಗ: ಯುವಜನತೆ ಮೊಬೈಲ್, ಟಿವಿ, ಮನರಂಜನೆ, ಜಾತಿ ಹಾಗೂ ಕೋಮುವಾದದ ಬಗ್ಗೆ ಆಸಕ್ತಿ ತಾಳದೆ ಸಮಾಜ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು ಎಂದು ಡಿವೈಎಸ್‌ಐ ಸಂಘಟನೆ ಅಧ್ಯಕ್ಷೆ ಲವಿತ್ರಾ ಗುಲ್ಬರ್ಗಾ ಹೇಳಿದರು.

ತಾಲೂಕಿನ ಜಾಲಹಳ್ಳಿಯ ಅಂಬೇಡ್ಕರ್ ವಸತಿ ನಿಲಯದಲ್ಲಿ ಆಯೋಜಿಸಿದ್ದ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ಜಿಲ್ಲಾ ಮಟ್ಟದ ಯುವ ಜನರ ಕಾರ್ಯಾಗಾರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಯುವಜನರ ಗುರಿ ಉದ್ಯೋಗ ಪಡೆಯುವ ಜತೆಗೆ ಸಮಾಜದ ಕಳಕಳಿಗೆ ಮಿಡಿಯುವ ಉದ್ದೇಶ ಬೆಳೆಸಿಕೊಳ್ಳಬೇಕಿದೆ.

ಸರ್ಕಾರಗಳು ಜನಪರ ಆಡಳಿತ ನೀಡುವಲ್ಲಿ ಸೋತಿವೆ. ಇದರಿಂದ ಸಮಾಜ ನಿರುದ್ಯೋಗ, ಬಡತನದತ್ತ ಸಾಗುತ್ತಿದೆ. ಸರ್ಕಾರದ ವಿವಿಧ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ಎನ್ನುವ ಪದಪುಂಜ ಬಳಸಿ ಯುವ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸರ್ಕಾರ ಗುಣಮಟ್ಟದ ಶಿಕ್ಷಣ, ಉದ್ಯೋಗ, ಉತ್ತಮ ಆರೋಗ್ಯ ಸೇವೆ ಒದಗಿಸಿದರೆ ಮಾತ್ರ ಯುವಕರು ಆದರ್ಶ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.

ಪ್ರಮುಖರಾದ ಚನ್ನಬಸವ ಹಟ್ಟಿ, ರಿಯಾಜ್ ಖುರೇಷಿ, ದಿಲ್‌ಶಾದ್, ಬಾಬು, ಬಾಷಾ, ಹನುಮಂತ ಖಾನಾಪುರ, ಶಬ್ಬೀರ್ ಜಾಲಹಳ್ಳಿ, ವೆಂಕಟೇಶ, ಕೊಂಡಯ್ಯ ಘೋಷಾಲ್, ಗೋಪಿ ನಾಯಕ, ತಿಮ್ಮಣ್ಣ ಬೆಂಗಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net