ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು

7
ಹುಕ್ಕೇರಿ ಎಸ್‌ಕೆ ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಶಾಸಕ ನಿಖಿಲ ಕತ್ತಿ ಮಾತನಾಡಿದರು. ತಹಸೀಲ್ದಾರ್ ಮಂಜುಳಾ ನಾಯಕ, ಇಒ ಪ್ರವೀಣ ಕಟ್ಟಿ, ಪ್ರಸನ್ನ ಬೆಲ್ಲದ ಇತರರಿದ್ದರು.
Published on

ಹುಕ್ಕೇರಿ: ಯುವ ಜನಾಂಗ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಇಲ್ಲಿನ ಎಸ್‌ಕೆ ಹೈಸ್ಕೂಲ್‌ನಲ್ಲಿ ತಾಲೂಕಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಮಂಜುಳಾ ನಾಯಕ ಮಾತನಾಡಿ, ಭಾರತದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಕಂಡ ಇತರ ದೇಶಗಳು ಅಚ್ಚರಿ ಪಡುವಂತಾಗಿದೆ ಎಂದರು. ಆವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಆಶೀರ್ವಚನ ನೀಡಿದರು.

ಪ್ರತಿಭಾವಂತ ಮಕ್ಕಳು ಮತ್ತು ವಿಜೇತರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಪುರಸಭೆ ಸದಸ್ಯರಾದ ರಾಜು ಮುನ್ನೋಳಿ, ಭೀಮಶಿ ಗೋರಖನಾಥ, ರಾಜು ಕುರಂದವಾಡೆ, ಮುಖಂಡರಾದ ಸುಭಾಷ ನಾಯಿಕ, ಎಸ್.ನಂಜುಂಡಪ್ಪ, ಇಒ ಪ್ರವೀಣ ಕಟ್ಟಿ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಸಿಪಿಐ ಮಹಾಂತೇಶ ಬಸಾಪುರ, ವಲಯ ಅರಣ್ಯಾಧಿಕಾರಿಗಳಾದ ಪ್ರಸನ್ನ ಬೆಲ್ಲದ, ಮಹಾಂತೇಶ ಸಜ್ಜನ, ಬಿಆರ್‌ಸಿ ಎ.ಎಸ್.ಪದ್ಮನ್ನವರ, ಪುರಸಭೆ ಮುಖ್ಯಾಧಿಕಾರಿ ಕಿಶೋರ ಬೆಣ್ಣಿ, ಸಂತೋಷ ನಾಯಿಕ, ಬಿಇಒ ಪ್ರಭಾವತಿ ಪಾಟೀಲ, ಎಸ್.ಆರ್.ಘಸ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net