

ಬೆಳಗಾವಿ: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಇಂಜಿನಿಯರ್ ಪಾತ್ರ ಸಾಕಷ್ಟಿದೆ ಎಂದು ಅಶೋಕ ಐರನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಬರವಾಡಿ ಹೇಳಿದರು.
ತಾಲೂಕಿನ ಕಾಕತಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್, ಚೊನ್ನದ ಸ್ಟೀಲ್ ಕಾರ್ಪೋರೇಶನ್ ಹಾಗೂ ಶ್ರೀ ಸಿಮೆಂಟ್ ಲಿಮಿಟೆಡ್, ಟರ್ಬೋ ಸ್ಟೀಲ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಇಂಜಿನಿಯರ್ಸ್ ಡೇ ಹಾಗೂ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರು ವಿವಿಧ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದು, ಅವರ ಕಾರ್ಯವೈಖರಿಯನ್ನು ಇಂಜಿನಿಯರ್‌ಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಿಸಿಇಎ ನೂತನ ಅಧ್ಯಕ್ಷ ರಮೇಶ ಜಿ.ಟಿ.ಮಾತನಾಡಿ, 25 ವರ್ಷದಿಂದ ನಮ್ಮ ಅಸೋಸಿಯೇಶನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು. ನೂತನ ಅಧ್ಯಕ್ಷ ರಮೇಶ ಜಿ.ಟಿ., ಉಪಾಧ್ಯಕ್ಷರಾಗಿ ಸಿ.ಆರ್.ಪಾಟೀಲ, ಕಾರ್ಯದರ್ಶಿ ವಿರೇಶ ಶೆಟ್ಟನ್ನವರ, ಖಜಾಂಚಿ ಚಂದ್ರಕಾಂತ ಮನಗುತ್ತಿ, ಜಂಟಿ ಕಾರ್ಯದರ್ಶಿ ಆದರ್ಶ ಮುಚ್ಚಂಡಿ, ನಿರ್ದೇಶಕರಾದ ಸಂಗ್ರಾಮ ಪಾಟೀಲ, ವಿನಯ ಬೆಹೆರೆ, ಮಲ್ಲಿಕಾರ್ಜುನ ಪಾಟೀಲ, ಸಂಜೀವ ಹಂಪಣ್ಣವರ, ಮಹೇಶ ಅರಬೋಳೆ, ಎಸ್.ಎ.ಪಾಟೀಲ, ಭೀಮಸೇನ್ ಜಿರಲಿ, ರಾಜಕುಮಾರ ಹೊಂಗಲ, ನಿಲೇಶ್ ಪಾಟೀಲ, ಉಮೇಶ ಸರ್ನೋಬತ್, ಆನಂದ ಕುಲಕರ್ಣಿ, ಪಿ.ಎಸ್.ಹಿರೇಮಠ ಹಾಗೂ ಮಲ್ಲಿಕಾರ್ಜುನ ಮುದ್ನಣವರ ಅವರನ್ನು ಅಭಿನಂಧಿಸಲಾಯಿತು. ಟರ್ಬೋ ಸ್ಟಿಲ್ ಸಂಸ್ಥೆಯ ವ್ಯವಸ್ಥಾಪಕ ಶಿವಪುತ್ರಪ್ಪ, ಶ್ರೀ ಸಿಮೆಂಟ್ ಲಿಮಿಟಿಡ್ ತಾಂತ್ರಿಕ ಮುಖ್ಯಸ್ಥ ವೆಂಕಟರಮಣ ರೆಡ್ಡಿ ಇತರರಿದ್ದರು.