ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿ ಒದಗಿಸಲಿ

18RAM1
Published on

ರಾಮದುರ್ಗ: ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ರಾಮದುರ್ಗ ತಾಲೂಕಿನ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ, ಸವದತ್ತಿ ತಾಲೂಕಿನ ಯಲ್ಲಮ್ಮದೇವಿ, ಶಬರಿಕೊಳ್ಳದಂತಹ ಹಲವು ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಈ ರೈಲು ಮಾರ್ಗ ಅನುಕೂಲವಾಗುತ್ತದೆ ಎಂದು ಹಲವು ವರ್ಷಗಳಿಂದ ಸ್ಥಳೀಯರು ಒತ್ತಾಯಿಸಿದ್ದಾರೆ. 2016-17 ರಲ್ಲಿ ರೈಲು ಮಾರ್ಗದ ಸರ್ವೇ ಮಾಡಿ, 2019ರಲ್ಲಿ ಅಂದಾಜು ಪತ್ರಿಕೆ ತಯಾರಿಸಲಾಗಿತ್ತು. ಆದರೆ, ನಿರ್ಮಾಣ ಕೆಲಸ ಆರಂಭವಾಗಿಲ್ಲ. ರಾಜ್ಯ ಸರ್ಕಾರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈತರಿಂದ ಭೂಮಿ ಖರೀದಿಸಿಕೊಡುತ್ತೇವೆ ಎಂದು ಶಿಾರಸು ಮಾಡಿದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಅನುಕೂಲ ಎಂದು ತಿಳಿಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿ ಅವರು ಸವದತ್ತಿಯಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅರೆಬೆತ್ತಲೆಯಾಗಿ ಸ್ಥಳೀಯರೊಂದಿಗೆ ನಾಲ್ಕು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮಾರ್ಗ ನಿರ್ಮಾಣದ ಅಗತ್ಯ ಅರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಪ್ರತಿ ವರ್ಷ 1.43 ಕೋಟಿ ಜನತೆ ಆಗಮಿಸುತ್ತಾರೆ. ಹಲವು ವರ್ಷಗಳ ಹೋರಾಟಕ್ಕೆ ಬೆಲೆ ಸಿಗಬೇಕಾದರೆ ರಾಜ್ಯ ಸರ್ಕಾರ ಮೊದಲು ಭೂಮಿ ನೀಡುವ ಸಮ್ಮತಿ ಸೂಚಿಸಿ ಶಿಾರಸು ಪತ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಮುಖಂಡರಾದ ಗೈಬು ಜೈನೆಖಾನ್, ಮಹ್ಮದಶಫಿ ಬೆಣ್ಣಿ, ಎಸ್.ಜಿ. ಚಿಕ್ಕನರಗುಂದ, ಜಹೂರ್ ಹಾಜಿ, ಸುಭಾಸ ಘೋಡಕೆ, ಬಿ.ಯು. ಬೈರಕದಾರ, ನಾಗಪ್ಪ ಸಂಗೊಳ್ಳಿ, ದಾದಾಪೀರ್ ಕೆರೂರ, ಡಿ.ಎ್. ಹಾಜಿ, ಎ.ಆರ್. ಪಠಾಣ, ಶಶಿಕಾಂತ ನೆಲ್ಲೂರ, ಎಂ.ಕೆ. ಯಾದವಾಡ, ಪಿ.ಎಲ್. ಮೀಸಾಳೆ, ರಾಜು ಮಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net