ಜನಸಾಮಾನ್ಯರಿಗೆ ಜನೌಷಧ ಕೇಂದ್ರ ಆಸರೆ

7GKK1
Published on

ಗೋಕಾಕ: ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳು ಜನಸಾಮಾನ್ಯರ ಆರೋಗ್ಯ ಕಾಪಾಡುವ ಆಶಾಕೇಂದ್ರಗಳಾಗಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಗೋಕಾಕ ನಗರದ ಸಾರ್ವಜನಿಕ ತಾಲೂಕಾಸ್ಪತ್ರೆ ಬಳಿಯ ಜನೌಷಧ ಮಳಿಗೆಗೆ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಯೋಜನೆಯ 11ನೇ ವರ್ಷಾಚರಣೆ ನಿಮಿತ್ತ ಶುಕ್ರವಾರ ಭೇಟಿ ನೀಡಿ ಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

2000ಕ್ಕಿಂತ ಹೆಚ್ಚು ಔಷಧಗಳು, 300ಕ್ಕಿಂತ ಹೆಚ್ಚು ಸರ್ಜರಿ ಉಪಕರಣ ವಿತರಿಸಲಾಗುತ್ತದೆ. ಇದರಿಂದ ದೇಶದ ಜನಸಾಮಾನ್ಯರ ಸುಮಾರು 30,000 ಕೋಟಿ ರೂ. ಉಳಿತಾಯ ಮಾಡಲು ಈ ಯೋಜನೆ ಸಲವಾಗಿದೆ. ಕಡಿಮೆ ವೆಚ್ಚದಲ್ಲಿ ಔಷಧಗಳು ಕೈಗೆಟುಕುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 25 ಕೇಂದ್ರ ಹಾಗೂ ರಾಜ್ಯದಲ್ಲಿ 1,400 ಕೇಂದ್ರ ಕಾರ್ಯನಿರ್ವಹಿಸುತ್ತಿವೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಮುಖಂಡರಾದ ಬಸವರಾಜ ಹುಳ್ಳೇರ, ಲಕ್ಷ್ಮಣ ತಳ್ಳಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ್, ಸೋಮಶೇಖರ ಮಗದುಮ್ಮ, ಪ್ರಕಾಶ ವರದಾಯಿ, ಲಕ್ಷ್ಮಣ ಸತ್ತಿಗೇರಿ, ಬಿ.ಎಂ. ಹಿಂಡಿಹೊಳಿ, ಸಾಂಭಶಿವ ಭರಬರೆ, ರಮೇಶ ದೊಡ್ಡಮನಿ, ಆನಂದ ಕೌತನಾಳ. ದೀಲಿಪ ಮಜಲಿಕರ, ವಿರೂಪಾಕ್ಷ ಗಚ್ಚಿ, ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net