ಮಗುವಿಗೆ ಎದೆ ಹಾಲು ಜೀವ ರಕ್ಷಕ

2SND-01
ಸಿಂಧನೂರಿನಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡಾ.ನಾಗರಾಜ ಕಾಟ್ವಾ, ಆರೋಗ್ಯ ಇಲಾಖೆ ಬಿಎಚ್‌ಒ ಗೀತಾ ಹಿರೇಮಠ, ಕಾಲೇಜ್ ಪ್ರಾಚಾರ್ಯ ಸಿರಿಲ್, ಆರೋಗ್ಯ ಇಲಾಖೆ ಸಹಾಯಕಿ ಪುಷ್ಪರಾಣಿ, ಶಿವನಮ್ಮ ಇದ್ದರು.
Published on

ಸಿಂಧನೂರು: ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಎದೆ ಹಾಲಿನ ಪಾತ್ರ ಹಿರಿದಾಗಿದ್ದು, ಪೌಷ್ಠಿಕತೆ ಹೆಚ್ಚಿಸುತ್ತದೆಂದು ಸ್ತ್ರೀರೋಗ ತಜ್ಞ ಡಾ.ನಾಗರಾಜ ಕಾಟ್ವಾ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸನ್‌ರೈಸ್ ಸ್ಕೂಲ್ ಆಫ್ ನರ್ಸಿಂಗ್ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿ ಎದೆ ಹಾಲು ಮಗುವಿಗೆ ಜೀವ ರಕ್ಷಕ. ಮಗು ಹುಟ್ಟಿದ ಅರ್ಧ ಗಂಟೆ ಒಳಗೆ ಎದೆಹಾಲು ಕುಡಿಸಿಬೇಕು. ಮಕ್ಕಳ ಬೆಳವಣಿಗೆಗೆ ಜಾಗೃತಿ ವಹಿಸಬೇಕು.

ಕಾಲೇಜ್ ಪ್ರಾಚಾರ್ಯ ಸಿರಿಲ್ ಮಾತನಾಡಿ, ಹುಟ್ಟಿದ ಮಗುವಿಗೆ ತಾಯಿ ಎದೆ ಹಾಲು, ಮೊದಲ ಲಸಿಕೆ ಕೊಡಬೇಕು. ಮಗುವಿಗೆ ಎದೆ ಹಾಲು ಕೊಡುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತದೆ. ಆದ್ದರಿಂದ ಎದೆ ಹಾಲಿನ ಮಹತ್ವ ಎಲ್ಲರೂ ಅರಿಯಬೇಕು ಎಂದರು.
ಆರೋಗ್ಯ ಇಲಾಖೆ ಸಹಾಯಕಿ ಪುಷ್ಪರಾಣಿ, ಶಿವನಮ್ಮ, ಆರೋಗ್ಯ ಇಲಾಖೆ ಬಿಎಚ್‌ಒ ಗೀತಾ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net