ನೊಂದವರ ಪಾಲಿನ ನಂದಾದೀಪ ಅರಸು

20RAM3
Published on

ರಾಮದುರ್ಗ: ಹಿಂದುಳಿದ ವರ್ಗ, ದೀನ ದಲಿತರ ಏಳಿಗೆಗಾಗಿ ಹಾಗೂ ಬಡ ವಿದ್ಯಾರ್ಥಿಗಳು ಶಿಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರು ರಾಜ್ಯದಲ್ಲಿ ವಸತಿ ನಿಲಯ ತೆರೆದು ನೊಂದವರ ಪಾಲಿನ ನಂದಾದೀಪವಾಗಿ ಹೊರಹೊಮ್ಮಿದ್ದಾರೆ ಎಂದು ತಾಪಂ ಇಒ ಬಸವರಾಜ ಐನಾಪುರ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು. ವಸತಿ ನಿಲಯದ ವಿದ್ಯಾರ್ಥಿಗಳು ಸರ್ಕಾರದ ಯೋಜನೆ ಸದ್ಭಳಕೆ ಮಾಡಿಕೊಂಡು ದೇಶಕ್ಕೆ ಆಸ್ತಿಯಾಗಿ ಬೆಳೆದು ನಿಲ್ಲಬೇಕು ಎಂದರು.

ಪುರಸಭೆ ಅಧ್ಯೆ ಲಕ್ಷಿ$್ಮ ಕಡಕೋಳ ಮಾತನಾಡಿ, ಡಿ. ದೇವರಾಜ ಅರಸು ಅವರ ಶ್ರಮದಿಂದ ಇಂದು ಎಲ್ಲ ಸೌಲಭ್ಯ ಬಡ ಮಕ್ಕಳಿಗೆ ಸಿಗುತ್ತಿವೆ ಎಂದರು.

ತಾಲೂಕು ಹಿಂದುಳಿದ ವರ್ಗಗಳ ಪ್ರಭಾರ ಕಲ್ಯಾಣಾಧಿಕಾರಿ ರವಿ ಪರವಿನಾಯ್ಕರ ಮಾತನಾಡಿದರು.

ಗ್ರೇಡ್​&2 ತಹಸೀಲ್ದಾರ್​ ಸಂಜಯ ಖಾತೇದಾರ, ಬ್ಯಾಂಕ್​ ಆ್​ ಬರೋಡಾ ಶಾಖಾ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ, ಬಿಸಿಎಂ ಇಲಾಖೆಯ ಸಿ.ಎಸ್​. ಬಿರಾದಾರ, ರತ್ನಾ ಮೇಟಿ ಮಾತನಾಡಿದರು. ಸಿ.ಎಸ್​. ಬೆಂಬಳಗಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ತೆಗ್ಗಿಹಳ್ಳಿ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಾರ್ಷಿಕ ಪರೀೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕಿ ಸುನಂದಾ ವಾಲಿ, ವೆದ್ಯಾಧಿಕಾರಿ ಗಿರೀಶ ಪಾಟೀಲ ಇತರರು ಇದ್ದರು. ಶಿವಪ್ರಸಾದ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net