

ಮುಂಡರಗಿ: ತಾಲೂಕಿನ ಹಿರೇವಡ್ಡಟ್ಟಿ ಗ್ರಾಪಂ ಅಧ್ಯಕ್ಷೆಯಾಗಿ ನಾಗವ್ವ ವೆಂಕಪ್ಪ ಬಳ್ಳಾರಿ ಹಾಗೂ ಉಪಾಧ್ಯಕ್ಷರಾಗಿ ಹನುಮರೆಡ್ಡಿ ಮಲ್ಲಪ್ಪ ಮೇಟಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲಿತ ನಾಗವ್ವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹನುಮರೆಡ್ಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ಎಂ.ಎಫ್.ಬಾರ್ಕಿ ಅವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.
ನಾಗವ್ವ ಬಳ್ಳಾರಿ ಅವರು ಈ ಹಿಂದೆಯೂ ಹಿರೇವಡ್ಡಟ್ಟಿ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇಬ್ಬರನ್ನೂ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಸಿಹಿ ವಿತರಿಸಿದರು. ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಿದ್ದಪ್ಪ ಕರೆಕಲ್ಲು, ಹುಲಿಗೆವ್ವ ಜಂಗಣವಾರಿ, ಗಂಗವ್ವ ಗೆಜ್ಜಿ, ಶಿವಕ್ಕ, ಶರಣಪ್ಪ ನಂದಿಕೋಳ, ಲೋಕಪ್ಪ ನಂದಿಕೋಳ, ಮಲ್ಲಪ್ಪ ಕೊಂಚಗೇರಿ, ಶಿವಪ್ಪ ಅಳವಂಡಿ, ಹುಲಿಗೇಶ ನಾಗರಹಳ್ಳಿ, ಪ್ರಶಾಂತ ನಾಗರಹಳ್ಳಿ, ಸುರೇಶ ಮುಪ್ಪಿನೆಣ್ಣಿ, ಅಬ್ದುಲ್‌ರೈಮಾನ್ ಕಲಕೇರಿ, ಉಮೇಶ ಆಲೂರ ಇತರರು ಇದ್ದರು.