ತೆಲಗಿ ಪಿಕೆಪಿಎಸ್‌ಗೆ ಶಿವಾನಂದ ಅಧ್ಯಕ್ಷ, ಶಿದ್ರಾಮಪ್ಪಗೌಡ ಉಪಾಧ್ಯಕ್ಷ

For Telagi PKPS, Sivananda is the president, Shidramappa Gowda is the vice president
ಗೊಳಸಂಗಿ ಸಮೀಪದ ತೆಲಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಶಿವಾನಂದ ಸವದಿ, ಉಪಾಧ್ಯಕ್ಷರಾಗಿ ಶಿದ್ರಾಮಪ್ಪಗೌಡ ಪಾಟೀಲ ಆಯ್ಕೆಗೊಂಡರು. ಈರಪ್ಪಗೌಡ ಹಚ್ಚಡದ, ಪ್ರಭಾಕರ ಲಕ್ಷೆಟ್ಟಿ, ಭೀಮರಾವ್ ಕುಲಕರ್ಣಿ ಇತರರಿದ್ದರು.
Published on

ಗೊಳಸಂಗಿ:  ಸಮೀಪದ ತೆಲಗಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶನಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಶಿವಾನಂದ ಹನುಮಂತಪ್ಪ ಸವದಿ, ಉಪಾಧ್ಯಕ್ಷರಾಗಿ ಶಿದ್ರಾಮಪ್ಪಗೌಡ ಭೀಮನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಎಸ್.ಎಂ.ಹಂಗರಗಿ ಘೋಷಿಸಿದರು.

ನೂತನ ನಿರ್ದೇಶಕರಾದ ಈರಪ್ಪಗೌಡ ಹಚ್ಚಡದ, ಪ್ರಭಾಕರ ಲಕ್ಷೆಟ್ಟಿ, ಭೀಮರಾವ್ ಕುಲಕರ್ಣಿ, ಮುತ್ತಪ್ಪ ಉಪ್ಪಾರ, ಮುತ್ತಪ್ಪ ಪೂಜಾರಿ, ಕಾಶಿನಾಥ ಚಲವಾದಿ, ತಿಪ್ಪಣ್ಣ ಈರಗಾರ, ಮಾದೇವಿ ಮಾಗಿ, ಜಯಶ್ರೀ ತೋಳಮಟ್ಟಿ, ಶೇಖರ ರಾಠೋಡ, ಪ್ರಮುಖರಾದ ಎಸ್.ಜಿ.ವಸದ, ಪವಾಡಯ್ಯ ಮಠಪತಿ, ಗೋಪಾಲ ನಿಡಗುಂದಿ, ಭೀಮನಗೌಡ ಮನಗೂಳಿ, ಶ್ರೀಶೈಲಗೌಡ ಪಾಟೀಲ, ಬಸವರಾಜ ಗಬಸಾವಳಗಿ, ಪರಶುರಾಮ ಬಿರಾದಾರ, ಹನುಮಂತ ಎಲಿಬಳ್ಳಿ, ಯಲಗೂರದಪ್ಪ ಬಿರಾದಾರ, ಈರಣ್ಣ ಚಿಮ್ಮಲಗಿ, ಯಂಕನಗೌಡ ಬಿರಾದಾರ ಇತರರಿದ್ದರು. ಇದೇ ವೇಳೆ ಅಭಿಮಾನಿ ರೈತರು ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net