

ನಾಗರಮುನ್ನೋಳಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿರಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಸೀತಾರಾಮ ಹೇಳಿದರು.
ಗ್ರಾಮದ ನಮ್ಮೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚಿಣ್ಣರ ಸಂಭ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡಲು ಶಿಕ್ಷಕರು ಉತ್ತಮವಾಗಿ ಬೋಧಿಸುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಉದ್ಯಮಿ ಮಹೇಶ ಬೆಲ್ಲದ ಮಾತನಾಡಿ, ವಿದ್ಯಾರ್ಥಿಗಳಿಗೆ ಬದಲಾಗುತ್ತಿರುವ ತಂತ್ರಜ್ಞಾನದ ಶಿಕ್ಷಣ ನೀಡಬೇಕು. ಅದರಂತೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಶಿಕ್ಷಕರಿಗೆ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗುವುದು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಭೀಮಪ್ಪ ನಾವಿ, ಪಿಎಸ್‌ಐ ಬಸಗೌಡ ನೇರ್ಲಿ, ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು.
ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ, ಗ್ರಾಪಂ ಅಧ್ಯಕ್ಷೆ ರಾಜಮಾ ಮುಲ್ತಾನಿ, ಉಪಾಧ್ಯಕ್ಷೆ ಶಾಂತಾ ಬಾನಿ, ರಾಘವೇಂದ್ರ ಬಡಿಗೇರ, ಎಂ.ಎಸ್.ಈಟಿ, ಮಹಾದೇವ ಚೌಗಲಾ, ರಮೇಶ ಕಾಳನ್ನವರ, ಸಂತೋಷ ಹಿರೇಮಠ, ಲಾಡಜಿ ಮುಲ್ತಾನಿ, ಎಂ.ಬಿ.ಆಲೂರೆ, ಡಿ.ಆರ್.ಕೊಟೆಪ್ಪಗೋಳ, ಶಾಹೀದ ಗೌಂಡಿ, ಪ್ರಿಯಾಂಕಾ ಈಟಿ, ನಿಜಾಮ್ ೆಂಡಾರಿ, ಅರುಣ ಮರ‌್ಯಾಯಿ, ಡಾ.ಗಣೇಶ ಮರ‌್ಯಾಯಿ, ವೈ.ಎಸ್.ಬುಡಗೋಳ, ಸುವರ್ಣಾ ಯಾದಗೂಡೆ, ಸಂತೋಷ ಟೋಣಪೆ, ಮಹಾದೇವಿ ಮಾಳಗೆ, ಮಾಯವ್ವ ಬಂಬಲವಾಡಿ, ಮಿಥುನ ಕಾಂಬಳೆ, ಉದಯ ಹರಗಾಪುರೆ, ಸುಜಾತಾ ಹುಲ್ಲೇನ್ನವರ ಇತರರಿದ್ದರು.