

ಬೈಲಹೊಂಗಲ: ಮೊರಾರ್ಜಿ ಶಾಲೆ ಸೇರಿ ವಿವಿಧ ವಸತಿ ಶಾಲೆಗಳು ಬಡ ವಿದ್ಯಾರ್ಥಿಗಳಿಗೆ ವರದಾನವಾಗಿವೆ. ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಅಶೋಕ ಬ್ಯಾಳಿ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಪಾಲಕರು ಆಗಾಗ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದರು. ವಸತಿ ನಿಲಯದ ಮೇಲ್ವಚಾರಕಿ ಲಕ್ಷಿ$್ಮ ಕುಂಬಾರ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಸರ್ಕಾರ ಮಹಾತ್ವಾಕಾಂೆ ಯೋಜನೆಗಳ ಮೂಲಕ ಸೌಲಭ್ಯ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು. ಶಿಕರಾದ ಎಂ.ಆರ್.ಗಾಣಗಿ, ಜಿ.ಎಸ್.ಕೊಟಬಾಗಿ, ರವಿ ರೂಡಬಸಣ್ಣವರ, ಪಿ.ಎ.ರೇಳೇಕರ, ಆರ್.ಎಸ್.ಎಮ್ಮಿ, ಎಸ್.ಎಸ್.ಛಲವಾದಿ, ಪಿ.ವಿ.ಹಂದಿಗನೂರ, ಎಂ.ಪಿ.ಹಿರೇಮಠ, ಸಿ.ಎಂ.ಸಾಲಿಮಠ, ಎನ್.ಜಿ.ಮುದ್ದನಗೌಡರ, ಎ.ಆರ್.ಪಾಟೀಲ, ಎಸ್.ಎಸ್.ಹದಲಿ ಇತರರಿದ್ದರು.