

ಲಿಂಗಸುಗೂರು: ತಾಲೂಕಿನ ಅಡವಿಭಾವಿ ಹಾಗೂ ರಾಯಚೂರು ರಸ್ತೆಯಲ್ಲಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಡಿಪೋ ಸಂಚಾರ ನಿರೀಕ್ಷಕ ಮರಿಯಪ್ಪಗೆ ಮಂಗಳವಾರ ಮನವಿ ಸಲ್ಲಿಸಿದರು.
ವಸತಿ ನಿಲಯಗಳಿಂದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆ, ಕಾಲೇಜು ತಲುಪುವಷ್ಟರಲ್ಲಿ ತರಗತಿಗಳು ಆರಂಭವಾಗಿರುತ್ತವೆ. ಮಧ್ಯಾಹ್ನ ಊಟಕ್ಕಾಗಿ ವಸತಿ ನಿಲಯಕ್ಕೆ ಬರಲು ತೊಂದರೆಯಾಗುತ್ತಿದೆ.
ಇದರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುವಂತಾಗಿದೆ. ವಸತಿ ನಿಲಯಗಳ ಹತ್ತಿರದ ಬಸ್‌ಗಳ ನಿಲುಗಡೆ ಮಾಡಬೇಕು. ನಿರ್ಲಕ್ಷೃ ತೋರಿದರೆ ವಸತಿ ನಿಲಯ ವಿದ್ಯಾರ್ಥಿಗಳೊಂದಿಗೆ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಸಿದರು. ಪ್ರಮುಖರಾದ ವಿಜಯಕುಮಾರ, ಅಭಿಷೇಕ ನಾಯಕ, ಪ್ರೇಮಕುಮಾರ ಪಾಟೀಲ್, ಸಲೀಂ ಖಾನ್, ಅಶೋಕ ನಾಯಕ, ಶಿವು ಪತ್ತಾರ ಇತರರಿದ್ದರು.