ಸದೃಢ ದೇಹವೃದ್ದಿಗೆ ರಾಗಿಮುದ್ದೆ ಸೇವಿಸಿ: ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ ಅನಿಸಿಕೆ

tvg
ತಾವರಗೇರಾದ ಸರ್.ಎಂ.ವಿಶ್ವೇಶ್ವರಯ್ಯ ಪಿಯು ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳು ರಾಗಿಮುದ್ದೆ ಪ್ರದರ್ಶಿಸಿದರು. ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ ಹಾಗೂ ವಿದ್ಯಾರ್ಥಿಗಳಿದ್ದರು.
Published on

ತಾವರಗೇರಾ: ರಾಗಿಮುದ್ದೆಯನ್ನು ನಿತ್ಯ ಸೇವಿಸುವುದರಿಂದ ಸದೃಢ ದೇಹವೃದ್ದಿಯಾಗಲಿದ್ದು, ಜೊತೆಗೆ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ ಎಂದು ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ ಹೇಳಿದರು.


ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ರಾಗಿಮುದ್ದೆ ಪಾಠದ ಪ್ರಯೋಗಾತ್ಮಕವಾಗಿ ಪ್ರಾತ್ಯಕ್ಷಿತೆಯಲ್ಲಿ ಶುಕ್ರವಾರ ಮಾತನಾಡಿದರು. ಇಂದಿನ ದಿನಗಳಲ್ಲಿ ಹೈಬ್ರೀಡ್ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುತ್ತಿದೆ. ಆದ್ದರಿಂದ ನಿತ್ಯ ರಾಗಿಮುದ್ದೆ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಾಗಿದೆ ಎಂದರು. ರಾಗಿಮುದ್ದೆ ಮಾಡುವ ರೀತಿ ಹಾಗೂ ಅದನ್ನು ಸವಿಯುವ ಬಗ್ಗೆ ವಿವರಿಸಿ, ರಾಗಿಮುದ್ದೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net