ಸಮಾಜಕ್ಕೆ ರೇಣುಕಾಚಾರ್ಯರ ಕೊಡುಗೆ ಅಪಾರ

bbgd-12-1
ಬಸವನಬಾಗೇವಾಡಿ ಪಟ್ಟಣದ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾರ್ಯರ ಜಯಂತಿ ಕಾರ್ಯಕ್ರಮವನ್ನು ವೇದಿಕೆಯ ಗಣ್ಯರು ಉದ್ಘಾಟಿಸಿದರು.
Published on

ಬಸವನಬಾಗೇವಾಡಿ: ಸಮಾಜಕ್ಕೆ ರೇಣುಕಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ತಾಲೂಕು ಆಡಳಿತ ಹಾಗೂ ಜಂಗಮ ಸಮಾಜದಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಣುಕಾಚಾರ್ಯರು ಕೇವಲ ಜಂಗಮ ಸಮಾಜದ ಮೂಲ ಪುರುಷರಲ್ಲ. ಇಡೀ ಮಾನವ ಕುಲಕ್ಕೆ ಧರ್ಮದ ಸಿದ್ಧಾಂತವನ್ನು ಸಿದ್ಧಾಂತ ಸಿಖಾಮಣಿ ಮೂಲಕ ಬೋಧಿಸಿದ ಮಹಾನ್ ಪುರುಷರಾಗಿದ್ದಾರೆ.

ಮಲಪ್ರಭಾ ಭದ್ರಾ ನದಿ ದಂಡೆಯಲ್ಲಿ ರಂಭಾಪುರ ಪೀಠ ಸ್ಥಾಪಿಸಿ ಎಲ್ಲ ಧರ್ಮವನ್ನು ಉದ್ಧಾರ ಮಾಡಿದವರು ಶ್ರೀ ರೇಣುಕಾಚಾರ್ಯರು. ಕೃತಾಯುಗ, ತ್ರೇತಾಯುಗ, ದ್ವಾಪಾರಯುಗ ಹಾಗೂ ಕಲಿಯುಗ ಸೇರಿ ಎಲ್ಲ ಕಾಲಘಟ್ಟದಲ್ಲೂ ರೇಣುಕಾಚಾರ್ಯರ ಲೀಲೆಗಳನ್ನು ನಾವೆಲ್ಲ ಕಾಣಬಹುದಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಮಹಾಪುರುಷರ ಜಯಂತಿಯನ್ನು ಸರ್ಕಾರಮಟ್ಟದಲ್ಲಿ ಆಚರಿಸಲಾಗುತ್ತದೆ. ಆದರೆ, ಜಂಗಮ ಸಮಾಜದವರು ಅಧಿಕಾರಿಗಳೊಂದಿಗೆ ಒಟ್ಟಾಗಿ ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಸಿಡಿಪಿಒ ಶಿಲ್ಪಾ ಹಿರೇಮಠ ಮಾತನಾಡಿದರು.

ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಶಿವನಗೌಡ ಬಿರಾದಾರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ರುದ್ರಮುನಿ ಸಾರಂಗಮಠ, ಅಮರಯ್ಯ ಹಿರೇಮಠ, ರವಿ ಚಿಕ್ಕೊಂಡ, ವಿನೂತ ಕಲ್ಲೂರ, ಗ್ರೇಡ್-2 ತಹಸೀಲ್ದಾರ್ ಗುರು ನಾಯಕ ಇತರರಿದ್ದರು. ಸಂಗಯ್ಯ ಕಾಳಹಸ್ತೇಶ್ವರಮಠ ಸ್ವಾಗತಿಸಿದರು. ಶಿವರುದ್ರಯ್ಯ ಹಿರೇಮಠ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net