ಸಮಾಜಕ್ಕಾಗಿ ಮಾನವ ಬದುಕಲಿ

16Anand2
ಮರಡಿನಾಗಲಾಪುರದ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಕಲ್ಯಾಣ ಮಂಟಪವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು. ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಶ್ರೀ, ಸಂಸದ ಜಗದೀಶ ಶೆಟ್ಟರ, ವಿಠ್ಠಲ ಹಲಗೇಕರ ಇತರರಿದ್ದರು.
Published on

ಬೆಳಗಾವಿ: ಮನುಷ್ಯ ಸ್ವಾರ್ಥಕ್ಕಾಗಿ ಬದುಕದೆ, ಸಮಾಜಕ್ಕಾಗಿ ಬದುಕಬೇಕು. ಶರೀರ ಇರುವುದೇ ಪರೋಪಕಾರಕ್ಕಾಗಿ. ಸೇವಾ ಮನೋಭಾವ ಬರುವುದು ಸಂಸ್ಕಾರದಿಂದ ಮಾತ್ರ. ಮನುಷ್ಯ ಸಂಸ್ಕಾರವಂತನಾದರೆ ಮಹಾದೇವನಾಗಬಲ್ಲ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರದ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಗುರು ರೋಡ್ ಲೈನ್ಸ್‌ನ ಗುರುದೇವ ಪಾಟೀಲರು ನಿರ್ಮಿಸಿದ

‘ಬಿ.ಎಸ್. ಯಡಿಯೂರಪ್ಪ ಕಲ್ಯಾಣ ಮಂಟಪ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಬೆಳಗಾವಿ ಜಿಲ್ಲೆಯ ಜನರ ಪ್ರೀತಿ ಮತ್ತು ಅಭಿಮಾನಕ್ಕೆ ಆಭಾರಿಯಾಗಿದ್ದೇನೆ. ಇಲ್ಲಿಯ ಜನರ ಪ್ರೀತಿ ಆಶೀರ್ವಾದದಿಂದಲೇ ನಾಲ್ಕು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಬೆಳಗಾವಿಗರ ಪ್ರೀತಿ, ಆಶೀರ್ವಾದ ನನ್ನ ಹದಯದಲ್ಲಿದೆ ಎಂದರು. ಮೈತ್ರಾದೇವಿ ಯಡಿಯೂರಪ್ಪ ಭೋಜನಾಲಯ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಭೂಮಿ, ಪ್ರಕತಿ, ನೆಲ, ಜಲ ಇವುಗಳನ್ನು ತಾಯಿ ಸ್ವರೂಪದಲ್ಲಿ ನೋಡುವುದು ಭಾರತೀಯ ಸಂಸ್ಕೃತಿ. ಇದೇ ಸಂಸ್ಕೃತಿಯಲ್ಲಿ ಬೆಳೆದಿರುವ ನಾವು ನೆಲ ಮತ್ತು ಜಲ ಸಂರಕ್ಷಣೆಗಾಗಿ ಕಟಿಬದ್ಧರಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಸಂಸದ ಜಗದೀಶ ಶೆಟ್ಟರ ಮಾತನಾಡಿ, ಕಲ್ಯಾಣ ಮಂಟಪ ಕೇವಲ ಮದುವೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜ ಸುಧಾರಣೆಯ ಕಾರ್ಯಗಳಿಗೂ ಉಪಯೋಗವಾಗಲಿ ಎಂದರು.

ರಾಜ್ಯ ಸರ್ಕಾರದ ನಿಕಟಪೂರ್ವದೆಹಲಿ ವಿಶೇಷ ಪ್ರತಿನಿ ಶಂಕರಗೌಡ ಪಾಟೀಲ ಸ್ವಾಗತಿಸಿದರು. ಗುರು ರೋಡ್ ಲೆನ್ಸ್‌ನ ಗುರುದೇವ ಪಾಟೀಲ ದಂಪತಿಯನ್ನು ಗಣ್ಯರು ಸನ್ಮಾನಿಸಿದರು. ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಶ್ರೀ, ಮುರುಗೋಡ ದುರದುಂಡೀಶ್ವರ ಮಠದ ನೀಲಕಂಠ ಶ್ರೀ, ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಶ್ರೀ, ಕಾರಂಜಿ ಮಠದ ಗುರುಸಿದ್ಧ ಶ್ರೀ, ಹುಕ್ಕೇರಿ ಗುರು ಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಶ್ರೀ, ಶೇಗುಣಿಸಿ ವಿರಕ್ತಮಠದ ಮಹಾಂತ ಪ್ರಭು ಶ್ರೀ, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಶ್ರೀ, ನಿವತ್ತ ಮುಖ್ಯ ಅಭಿಯಂತ ವಿರೂಪಾಕ್ಷಿ ಯಮಕನಮರಡಿ, ಮಾಜಿ ಸಂಸದೆ ಮಂಗಲ ಅಂಗಡಿ, ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ವಿ.ಐ. ಪಾಟೀಲ, ಜಗದೀಶ ಮೆಟ್ಟಿಗುಡ್, ಸಂಜಯ ಪಾಟೀಲ, ಅನಿಲ ಬೆನಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net